ಉಡುಪಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಲಾಭದ ಆಮಿಷಾ ಒಡ್ಡಿ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿದ್ದು, ಅದರಂತೆಯೇ ಟ್ರೇಡಿಂಗ್ ಆಪ್ನಲ್ಲಿ ಹಣ ಹೂಡಿಕೆ ಹೆಸರಿನಲ್ಲಿ ಲಾಭದ ಆಸೆಯನ್ನು ತೋರಿಸಿ ವ್ಯಕ್ತಿಯೊಬ್ಬರು ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಮೋಸಹೋದ ವ್ಯಕ್ತಿಯನ್ನು ಹೆನ್ರಿ ಡಿ ಅಲ್ಮೇಡಾ ಎಂದು ಗುರುತಿಸಲಾಗಿದೆ. ಫೇಸ್ಬುಕ್ನಲ್ಲಿ ಇನ್ವೆಸ್ಟ್ಮೆಂಟ್ ಟ್ರೇಡಿಂಗ್ ಮಾಡುವ ಬಗ್ಗೆ ಜಾಹಿರಾತೊಂದು ಕಾಣಿಸಿದ್ದು ಅದನ್ನು ತೆರೆದು ನೋಡಿದ ಹೆನ್ರಿ ವಾಟ್ಸ್ಆಪ್ಗೆ ಟ್ರೇಡಿಂಗ್ ಹೂಡಿಕೆ ಮಾಡುವಂತೆ ಸಂದೇಶ ಬಂದಿತ್ತು. ಹೂಡಿಕೆ ಮಾಡುವ ಬಗ್ಗೆ ಮಾಹಿತಿಯನ್ನು ಒದಗಿಸಿ ಅಂಕಿತಾ ಘೋಷ್ ಎಂದು ಪರಿಚಯಿಸಿಕೊಂಡ ಯುವತಿ ಗ್ರೂಪ್ ಸೇರಿಸಿದ್ದಾಳೆ.
ಜು.22 – ಸೆ.01ರ ವರೆಗೆ ಹಂತ ಹಂತವಾಗಿ ಒಟ್ಟು 1,32,90,000ರೂ ಹಣ ಹೂಡಿಕೆ ಮಾಡಿದ್ದಾರೆ. ನಂತರದಲ್ಲಿ ಹೂಡಿಕೆ ಮಾಡಿದ ಹಣವೂ ಸಿಗದೆ ಲಾಭವೂ ಸಿಗದೆ ಮೋಸ ಮಾಡಲಾಗಿದೆ ಎಂದಿದ್ದಾರೆ. ಆನ್ಲೈನ್ ಮೂಲಕ ವಂಚಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
