
ಉಡುಪಿ: ಉಡುಪಿಯಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಕಾಲ್ ಸೆಂಟರ್ ಮೂಲಕ ನಾನಾ ರಾಷ್ಟ್ರಗಳಿಗೆ ಮಾದಕ ವಸ್ತು ಪೂರೈಕೆ ಮಾಡುತಿದ್ದ ಜಾಲವನ್ನು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಪತ್ತೆ ಹಚ್ಚಲಾಗಿದೆ. ಕಾಲ್ಸೆಂಟರ್ ತೆರೆದು ಬೇಡಿಕೆಯನ್ನು ಪಡೆದುಕೊಂಡು ದಿಲ್ಲಿಯಿಂದ ಬೇರೆ ರಾಷ್ಟ್ರಗಳಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಎನ್ನಲಾಗಿದೆ. ಹತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ೮ ಮಂದಿಯನ್ನು ಎನ್ಸಿಬಿ ಬಂಧಿಸಿ, ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿದೆ.
ಉಡುಪಿಯ ಕಾಲ್ ಸೆಂಟರ್ನಲ್ಲಿ 10 ಮಂದಿಯನ್ನು ನೇಮಿಸಿಕೊಂಡು ನಾನಾ ದೇಶಗಳಿಂದ ಬೇಡಿಕೆ ಪಡೆಯಲಾಗುತಿತ್ತು. ಗ್ಯಾಂಗ್ಗಳು ಕ್ರಿಪ್ಟೋ ಕರೆನ್ಸಿ ಪಾವತಿ, ಅನಾಮಧೇಯ ಡ್ರಾಪ್ ಶಿಪ್ ಅತ್ಯಾಧುನಿಕ ವಿಧಾನ ಅನುಸರಿಸುತ್ತಿವೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾದಕ ದ್ರವ್ಯ ಕಳ್ಳ ಸಾಗಣೆ ಜಾಲ ಮಟ್ಟಹಾಕಲು ಹಾಗೂ ಜಾಲದಲ್ಲಿ ಎಲ್ಲಿಂದಾದರೂ ಕಾರ್ಯನಿರ್ವಹಿಸುತ್ತಿರುವ ಯುವಪೀಳಿಗೆಯನ್ನು ರಕ್ಷಿಸುವ ದೃಢ ನಿಶ್ಚಯ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.