
ಉಡುಪಿ: ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಲ್ಲಿ ವಂಚನೆಗಳು ನಡೆಯುತ್ತಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬರು ಫಾರೆಕ್ಸ್ ಟ್ರೇಡಿಂಗ್ನಲ್ಲಿ ವಂಚನೆಗೀಡಾಗಿದ್ದಾರೆ. ವಂಚನೆಗೆ ಒಳಗಾದ ಮಹಿಳೆಯನ್ನು ೩೩ವರ್ಷದ ಅರುಣಾ ಎಂದು ಗುರುತಿಸಲಾಗಿದೆ. ಆರಧ್ಯ ಎಂಬ ಮಹಿಳೆಯಿಂದ ವಂಚನೆ ನಡೆದಿದೆ ಎಂದು ತಿಳಿದು ಬಂದಿದೆ. ಆರಾಧ್ಯ ಎಂಬುವವರು ಅಭಿರಾಮ್ ಎಕ್ಸ್ಪೋಟ್ಸ್ನ ಸಿಇಒ ಎಂದು ಪರಿಚಯಿಸಿಕೊಂಡಿದ್ದು, ಅರುಣಾಳಿಗೆ ಕಂಪನಿಯಲ್ಲಿ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಗಳಿಸಬಹುದೆಂದು ಮರಳುಮಾಡಿದ್ದಾಳೆ ಅದರಂತೆಯೇ ಅರುಣಾ ಮರುಳಾಗಿ ಆರೋಪಿ ಕಳುಹಿಸಿದ ಯುಪಿಐಗೆ ಹಣವನ್ನು ಅನೇಕ ಕಂತುಗಳಂತೆ ಒಟ್ಟು11,50,480ರೂಗಳನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಯಾವುದೇ ಕಂಪನಿಗಳಲ್ಲಿ ಆರೋಪಿಯು ಹೂಡಿಕೆ ಮಾಡಿಲ್ಲ. ಹಣ ಹಿಂತಿರುಗಿಸದ ಕಾರಣ ಆತಂಕಕೊಳ್ಳಗಾದ ಅರುಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಾ ಪೋಲಿಸರಲ್ಲಿ ದೂರು ನೀಡಿದ್ದು, ಪೋಲಿಸರು ಆರೋಪಿಯ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 66(ಸಿ)(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.