
ಉಡುಪಿ: ಕೇರಳದ ವಿವಾಹಿತೆ ಮಹಿಳೆಯೊಬ್ಬಳು ಕೇರಳದ 17 ವರ್ಷದ ಬಾಲಕನನ್ನು ಕೊಲ್ಲರಿಗೆ ಕರೆ ತಂದು ವಸತಿ ಗೃಹವೊಂದರಲ್ಲಿ ಇದ್ದಳು. ಆಕೆಯನ್ನು ಕೇರಳದ ಚೇರ್ತಲ ನಿವಾಸಿಯಾದ ಸನೂಷ(27) ಎಂದು ಗುರುತಿಸಲಾಗಿದೆ. ಬಾಲಕನ ಮನೆಯವರು ಆಕೆ ಲೈಂಗಿಕ ತೃಷೆಯಿಂದ ಆತನನ್ನು ಅಪಹರಿಸಿದ್ದಾಳೆ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರು ಮಹಿಳೆಯ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕೊಲ್ಲೂರಿಗೆ ಪ್ರಯಾಣ ನಡೆಸುವ ಸಂದರ್ಭದಲ್ಲಿ ಅವರು ಎಲ್ಲಿಯೂ ಕೂಡ ಅವರ ಫೋನ್ಗಳನ್ನು ಬಳಸಿರಲಿಲ್ಲ ಆದ್ದರಿಂದ ಸುಳಿವು ಸಿಗದ ಕಾರಣ ಪತ್ತೆ ಮಾಡಲು ಕೊಂಚ ತಡವಾಯಿತು, ಆದರೆ ಕೊಲ್ಲೂರು ತಲುಪಿದ ಬಳಿಕ ಮಹಿಳೆ ತನ್ನ ಫೋನಿನಿಂದ ಗೆಳತಿಗೆ ಸಂದೇಶ ಕಳುಹಿಸಿದ್ದ ಕಾರಣ ಆ ಸುಳಿವಿನಿಂದ ಕೊಲ್ಲೂರು ವಸತಿ ಗೃಹದಲ್ಲಿ ಪೋಲಿಸರು ಅವರನ್ನು ಪತ್ತೆ ಹಚ್ಚಿ ಆ ಮಹಿಳೆಯನ್ನು ಬಂಧಿದ್ದಾರೆ ಎನ್ನಲಾಗಿದೆ.