
ಉಡುಪಿ: ಇಂದು ಮುಂಜಾನೆ ಕೆ.ಎಸ್.ಆರ್.ಟಿ.ಸಿ ಬಸ್ವೊಂದು ಡಿವೈಡರ್ಗೆ ಡಿಕ್ಕಿ ಹೊಡೆದಿರುವ ಘಟನೆ ಮಣಿಪಾಲದ ಲಕ್ಷೀಂದ್ರ ನಗರ ಸಮೀಪದಲ್ಲಿ ನಡೆದಿದ್ದು. ದಾವಣಗೆರೆಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಡಿವೈಡರ್ಗೆ ಹೊಡೆದಿದೆ. ಅದೃಷ್ಟವಶಾತ್ ಗಂಭೀರ ಗಾಯ ಹಾಗೂ ಯಾವುದೇ ರೀತಿಯ ಪ್ರಾಣಹಾನಿ ಕಂಡು ಬಂದಿಲ್ಲ. ಬಸ್ಸಿನ ಮುಂಭಾಗಕ್ಕೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ.
ಸ್ವಲ್ಪ ಸಮಯದ ವರೆಗೂ ಸಂಚಾರಕ್ಕೆ ತೊಂದರೆಯಾದರೂ ಪೋಲಿಸರು ಹಾಗೂ ಸ್ಥಳೀಯರ ಸಹಾಯದಿಂದ ವಾಹನ ಸಂಚಾರ ಮೊದಲಿನಂತಾಯಿತು. ವೇಗದ ಮಿತಿ ಹಾಗೂ ರಸ್ತೆ ಸುರಕ್ಷಾತಾ ಕ್ರಮಗಳನ್ನು ಅನುಸರಿಸುವಂತೆ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆಹಾಕಿದ್ದಾರೆ.