
ಉಡುಪಿ: ಬಿಲ್ಲವ ಸಮುದಾಯದ ಆರಾಧ್ಯ ದೈವವಾದ ಶ್ರೀ ನಾರಯಣ ಗುರು ವೃತ್ತವು ಉಡುಪಿಯ ಬನ್ನಂಜೆ ವೃತ್ತದಲ್ಲಿ ಅಧಿಕೃತವಾಗಿ ಸ್ಥಾಪಿಸಲಾಗಿತ್ತು ಆದರೆ ಇದೀಗ ಇದ್ದಕ್ಕಿದ್ದಂತೆ ಶ್ರೀ ನಾರಾಯಣ ಗುರು ವೃತ್ತವನ್ನು ಯಾವುದೇ ಮಾಹಿತಿಯನ್ನು ನೀಡದೇ ಕಿತ್ತು ಸ್ಥಳೀಯ ಪೋಲಿಸ್ ಠಾಣೆಯ ಬಳಿ ಪೊದೆಗಳ ಮಧ್ಯೆ ಎಸೆದು, ಬನ್ನಂಜೆ ವೃತ್ತದಲ್ಲಿ ಇದೀಗ ಬ್ಯಾಂಕ್ ಆಫ್ ಬರೋಡ ನಾಮಫಲಕದ ನೂತನ ವೃತ್ತವನ್ನು ನಿರ್ಮಿಸಲಾಗಿದೆ. ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ರವರು ಇದು ಬಿಲ್ಲವ ಸಮುದಾಯದ ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಉದ್ದೇಶಕ್ಕಾಗಿ ಹಾಗೂ ಯಾರ ಆದೇಶದಂತೆ ಈ ಕೃತ್ಯ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಬೇಕು ಇಲ್ಲವಾದಲ್ಲಿ ಬಿಲ್ಲವ ಸಮಾಜದವರನ್ನು ಒಟ್ಟಾಗಿಸಿ ಹೋರಾಟವನ್ನು ಕೈಗೊಳ್ಳಲಾಗುವುದೆಂದು ಪ್ರವೀಣ್ ಪೂಜಾರಿ ಎಚ್ಚರಿಕೆಯನ್ನು ನೀಡಿದ್ದಾರೆ.