
ದೇಶದಲ್ಲಿಯೇ ಇದೆ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಸಾಕಾನೆಗಳನ್ನು ಜಪಾನ್ ದೇಶಕ್ಕೆ ರವಾನೆ ಮಾಡಲಾಗಿದೆ. ಇದು ಕರ್ನಾಟಕದ ವನ್ಯಜೀವಿ ಇತಿಹಾಸದಲ್ಲೇ ಒಂದು ರೋಚಕ ಅಧ್ಯಾಯವಾಗಿದೆ. ಆನೆಗಳ ಬದಲಿಗೆ 4 ಚೀತಾ, 4 ಜಾಗ್ವಾರ್, 4 ಪೂಮಾ, 3ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳು ಬರಲಿವೆ. ಸಾಕಾನೆ ಸುರೇಶ್ ತನ್ನ ಬಾಲ್ಯದ ಗೆಳೆಯ ಬಸವನನ್ನು ಬಿಟ್ಟು ಬರಲು ಒಪ್ಪದೇ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿತು. ಉಳಿದ ಆನೆಗಳು ಹಿಂಬಾಲಿಸಿದವು.
ಸುಮಾರು ಎಂಟು ತಾಸು ವಿಮಾನ ಪ್ರಯಾಣವಿದ್ದು, ಕಳೆದ ಮೂರು ತಿಂಗಳಿನಿಂದ ತರಬೇತಿ ನೀಡಲಾಗಿತ್ತು. ಮಾವುತರು ಭಾರವಾದ ಮನಸ್ಸಿನಿಂದ ಆನೆಯನ್ನು ಕಳುಹಿಸಿ ಕೊಟ್ಟಿದ್ದಾರೆ.