ಚಿಕ್ಕಮಗಳೂರು: ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಕಾಡಂಚಿನಲ್ಲಿ ಹುಲಿ ದಾಳಿ ಹೆಚ್ಚಾಗಿರುವ ಪರಿಣಾಮ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸೂಚನೆಯಂತೆ ಬಂದ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಭದ್ರ ಅಭಯಾರಣ್ಯ ದತ್ತ ಪ್ರವಾಸಿಗರ ದಂಡು ಹೆಚ್ಚಾಗಿದ್ದು, ಕಳೆದ ವಾರದಿಂದ ಜೋಡಿ ಚಿರತೆಗಳು ಕೊಡುಬಂದಿದ್ದು, ವನ್ಯಜೀವಿ ಛಾಯಾಗ್ರಾಹಕರು ಸೇರಿದಂತೆ ಅಭಯಾರಣ್ಯದ ಪ್ರಾಣಿ ಪ್ರಿಯರ ಸಂಖ್ಯೆ ಹೆಚ್ಚಳವಾಗಿದೆ ಎಂದು ಚಿಕ್ಕಮಗಳೂರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಯಶ್ಪಾಲ್ ಕ್ಷೀರಸಾಗರ ತಿಳಿಸಿದರು.
