ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ಪ್ರದೇಶದ ಜಲಪಾತಗಳ ಬಳಿ ಎತ್ತರದ ಬಂಡೆಗಳ ಮಧ್ಯೆ ಪ್ರವೇಶಿಸಿ ಫೋಟೋ ಶೂಟ್ ಮಾಡುತ್ತಿರುವ ಪ್ರವಾಸಿಗರ ನಿರ್ಲಕ್ಷ್ಯ ನಡೆ ಮತ್ತೆ ಚರ್ಚೆಗೆ ಕಾರಣವಾಗಿದೆ. ನಿರಂತರವಾಗಿ ನೀರು ಹರಿಯುವ ಬಂಡೆಗಳು ಹೆಚ್ಚಾಗಿ ಜಾರುವ ಸ್ವಭಾವ ಹೊಂದಿದ್ದು, ಸ್ವಲ್ಪ ಜಾರಿದರೂ ಅಪಾಯ ತಪ್ಪದು. ಬಂಡೆಗಳ ಮೇಲೆ ಹತ್ತಿ ನಿಂತು ಬದುಕನ್ನೇ ಪಣಕ್ಕಿಟ್ಟು ಸಾಹಸ ಮಾಡುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಇದೇ ಸ್ಥಳದಲ್ಲಿ ಹಲವರು ಬಿದ್ದು ಜೀವ ಕಳೆದುಕೊಂಡ ದುರ್ಘಟನೆಗಳೂ ನಡೆದಿವೆ. ಎಚ್ಚರಿಕೆ ಫಲಕಗಳಿದ್ದರೂ, ಪ್ರವಾಸಿಗರು ಇಂತಾ ಹುಚ್ಚು ಸಾಹಸಕ್ಕೆ ಮುಂದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
