
ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹಾಗೂ ನಾಲ್ಕು ಮರಿಗಳು ಹಸುವಿನಲ್ಲಿದ್ದ ವಿಷದ ಮಾಂಸವನ್ನು ಸೇವಿಸಿ ಸಾವನಪ್ಪಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದ್ದಾರೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಗಗಳನ್ನು ಲ್ಯಾಬ್ಗೆ ಕಳುಹಿಸಲಾಗಿದೆ. ಮೂರು ದಿನದ ಮುಂಚೆ ಹುಲಿ ಮರಣವನ್ನು ಹೊಂದಿದ್ದು ಈ ಪ್ರಕರಣಕ್ಕೆ ಯಾರು ಹೊಣೆಗಾರರು ಎಂದು ಇಲಾಖಾ ಮಟ್ಟದಲ್ಲಿ ತನಿಖೆ ಮಾಡುತ್ತೇವೆ ಎಂದರು.
ಹುಲಿ ಭೇಟಿಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿಯೇ? ಹಸುವು ಮೊದಲೇ ವಿಷವನ್ನು ತಿಂದಿತ್ತಾ? ಎಂಬುದು ಲ್ಯಾಬ್ ಮೂಲಕ ಗೊತ್ತಾಗಲಿದೆ ಎಂದು ತಿಳಿಸಿದರು. ಹಸು ಯಾರದ್ದು, ತಮಿಳು ನಾಡಿನಿಂದ ಬಂದಿದೆಯೆ ಅಥವಾ ಸ್ಥಳೀಯರದ್ದ ಎಂದು ತನಿಖೆಯಾಗುತ್ತಿದೆ ಎಂದು ವಿವರಿಸಿದ್ದಾರೆ.