
ಮೈಸೂರು: ಆಗಸ್ಟ್ 11ರಿಂದ 13ರವರೆಗೆ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಬ್ರಹ್ಮವಿದ್ಯಾ ಸಂಸ್ಥೆ ಮತ್ತು ಡಿವಿಜಿ ಬಳಗ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ನಡೆಯುವ ‘ಭಾರತೀಯ ಸಂಗೀತ ಶಾಸ್ತ್ರ ದಿನಾಚರಣೆ’ ಅಂಗದ ಮೂರು ದಿನಗಳ ಕಲಾ ಉತ್ಸವದಲ್ಲಿ, ಯುವ ಸಂಗೀತ ಕಲಾವಿದರ ಕಛೇರಿಗಳು, ಕನ್ನಡ ಕಾವ್ಯ ವಾಚನ, ಆರೋಗ್ಯ ದಿನಚರಿ ಕುರಿತು ಉಪನ್ಯಾಸಗಳು, ಸಂಗೀತ ಮತ್ತು ವೈದ್ಯಕೀಯ ರೂಪಕ, ಯುಗಲ ಗಾಯನ, ಲಯಲಹರಿ, ಹಾಗೂ ‘ರಾ.ಸ. ಸಂಗೀತಗೋಷ್ಠಿಗಾಯನ’ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಇದೇ ವೇಳೆ ‘ವೇದಶಾಸ್ತ್ರಸೂರಿ’, ‘ಆಯುರ್ವೇದಶಾಸ್ತ್ರಸೂರಿ’ ಹಾಗೂ ಡಾ. ರಾ. ಸತ್ಯನಾರಾಯಣ ಸಂಸ್ಮರಣ ಪ್ರಶಸ್ತಿಗಳನ್ನು ಗಣ್ಯರಿಗೆ ಪ್ರದಾನ ಮಾಡುವ ಸಮಾರಂಭವೂ ನಡೆಯಲಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಆಯೋಜಕರಾದ ಕರ್ನಾಟಕ ಕಲಾಶ್ರೀ ಡಾ. ರಾ. ಸ. ನಂದಕುಮಾರ್ ಮತ್ತು ಶ್ರೀ ಕನಕರಾಜು ವಿನಂತಿಸಿದ್ದಾರೆ.