ಹೊಸ ವರ್ಷದ ಸಂಭ್ರಮದಲ್ಲಿ ಸಾಮಾಜಿಕ ಜಾಲತಾಣಗಳು ಶುಭಾಶಯ ಸಂದೇಶಗಳಿಂದ ತುಂಬಿರುವುದನ್ನು ದುರುಪಯೋಗಪಡಿಸಿಕೊಂಡು ಸೈಬರ್ ಅಪರಾಧಿಗಳು ಗಿಫ್ಟ್ ಲಿಂಕ್, ಸ್ಕ್ರ್ಯಾಚ್ ಕಾರ್ಡ್, APK ಫೈಲ್, QR ಕೋಡ್ ಹಾಗೂ ಫೇಕ್ ಕೊರಿಯರ್ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಪ್ರಸಿದ್ಧ ಸೈಬರ್ ತಜ್ಞ ಅನಂತ್ ಪ್ರಭು ಎಚ್ಚರಿಕೆ ನೀಡಿದ್ದಾರೆ. “ಹ್ಯಾಪಿ ನ್ಯೂ ಇಯರ್, ನಿಮಗೆ ವಿಶೇಷ ಗಿಫ್ಟ್ ಬಂದಿದೆ” ಎಂಬ ಆಕರ್ಷಕ ಸಂದೇಶಗಳನ್ನು ಅಮೆಜಾನ್, ಫ್ಲಿಪ್ಕಾರ್ಟ್, ಗೂಗಲ್ ಪೇ ಮೊದಲಾದ ಪ್ರಸಿದ್ಧ ಕಂಪೆನಿಗಳ ಹೆಸರಿನಲ್ಲಿ ಕಳುಹಿಸಿ, ಲಿಂಕ್ ಕ್ಲಿಕ್ ಮಾಡಿದ ಕ್ಷಣದಲ್ಲೇ ಮಾಲ್ವೇರ್ ಡೌನ್ಲೋಡ್ ಆಗಿ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡುವ ಮುನ್ನ URL ಪರಿಶೀಲಿಸಬೇಕು, APK ಅಥವಾ ಫೈಲ್ಗಳನ್ನು ಇನ್ಸ್ಟಾಲ್ ಮಾಡಬಾರದು, ಅಜ್ಞಾತ QR ಕೋಡ್ ಸ್ಕ್ಯಾನ್ ಮಾಡಬಾರದು, OTP ಅಥವಾ ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬಾರದು ಹಾಗೂ ಫೋನ್ನಲ್ಲಿ ‘Unknown Sources’ ಆಯ್ಕೆಯನ್ನು ಆಫ್ ಇಟ್ಟುಕೊಳ್ಳಬೇಕು ಹಾಗೂ ಆಂಟಿವೈರಸ್ ಆ್ಯಪ್ ಸದಾ ಅಪ್ಡೇಟ್ ಸ್ಥಿತಿಯಲ್ಲಿ ಇರಬೇಕು. ಸೈಬರ್ ಅಪರಾಧಕ್ಕೆ ಒಳಗಾದರೆ ತಕ್ಷಣವೇ 1930 ಗೆ ಕರೆ ಮಾಡಿ ದೂರು ನೀಡಬೇಕು ಎಂದು ಅವರು ಸಲಹೆ ನೀಡಿದರು.
