
ತೀರ್ಥಹಳ್ಳಿ: ಕಾಡನೆಯ ಹಾವಳಿ ಇನ್ನೂ ಕೊನೆಯಾಗಿಲ್ಲ. ಇದೀಗ ಕಾಡಾನೆಯು ತೀರ್ಥಹಳ್ಳಿಯ ಗಡಿಯಲ್ಲಿ ಬಂದಿದೆ ಎನ್ನಲಾಗಿದೆ. ಗಜರಾಜನು ಬೇಗಾರು- ಹೊಳೆಕೊಪ್ಪ ಸಮೀಪ ಇದ್ದು, ಇದು ಹೆಚ್ಚಾಗಿ ಆಗುಂಬೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಶೃಂಗೇರಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಆಗಮಿಸುತ್ತಿದೆ. ಬೇಗಾರಿನಿಂದ ಕಮ್ಮರಡಿ ಮಾರ್ಗವಾಗಿ ಆಗುಂಬೆ ಆಥವಾ ದೇವಂಗಿ ಈ ಎರಡು ಕಡೆಯಲ್ಲಿ ಯಾವ ಕಡೆಗೆ ಬೇಕಾದರೂ ಆನೆಯು ಸಂಚರಿಸಬಹುದಾಗಿದೆ. ಆನೆಯ ಆಗಮನವಾಗುತ್ತಿದ್ದಂತೆ ತೀರ್ಥಹಳ್ಳಿಯಲ್ಲಿ ದಸರಾ ನೋಡಲು ಆನೆಯು ಬಂದಿರಬಹುದು ಎಂಬ ಮಾತುಗಳು ಕೇಳಿ ಬಂದಿದೆ. ತೀರ್ಥಹಳ್ಳಿಯಲ್ಲಿ ದಸರಾಕ್ಕೆ 3-4 ವರ್ಷಗಳಿಂದ ಆನೆಯನ್ನು ಕರೆಸಬೇಕೆಂದು ಒತ್ತಾಯ ಕೇಳಿ ಬರುತ್ತಿತ್ತು ಆದರೆ ಆಗಿರಲಿಲ್ಲ. ದಸರಾ ಸಭೆಯನ್ನು ಶನಿವಾರದಂದು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಆನೆಯೇ ನೀವು ಕರೆಸುವುದಿಲ್ಲ ಎಂದು ತಾನೆ ಬಂದೆ ಎಂಬುದಾಗಿ ತೀರ್ಥಹಳ್ಳಿಗೆ ಆಗಮಿಸುತ್ತಿದೆ ಎಂಬ ಹಾಸ್ಯದ ಮಾತು ಕೇಳಿಬರುತ್ತಿದೆ.