
ತೀರ್ಥಹಳ್ಳಿ: ಪಟ್ಟಣದ ಸೀಬಿನಕೆರೆ ಸರ್ಕಾರಿ ಶಾಲೆಯಲ್ಲಿ ಪ್ರಾರ್ಥನೆ ಮಾಡುವ ಸಮಯದಲ್ಲಿ ಮುಖ್ಯ ಶಿಕ್ಷಕರಾದ ಸಾವಿತ್ರಿ ಮೇಡಂ ರವರು ವಿದ್ಯಾರ್ಥಿಗಳಿಗೆ ಮೊಬೈಲ್ನಿಂದ ಆಗುವ ದುಷ್ಪರಿಣಾಮದ ಕುರಿತು ತಿಳಿ ಹೇಳಿದ್ದಾರೆ. ಇದನ್ನು ಅರಿತ ವಿದ್ಯಾರ್ಥಿಗಳು ನಾವೆಲ್ಲರೂ ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ ಹಾಗೂ ನೋಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಸುತ್ತಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಈ ಶಪಥದಿಂದ ಶಾಲೆಯಲ್ಲಿ ಹಾಗೂ ಪೋಷಕರಲ್ಲಿ ಸಂತೋಷವನ್ನು ತಂದಿದೆ.