
ತೀರ್ಥಹಳ್ಳಿ: ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನವು ಬಹಳ ಪ್ರಖ್ಯಾತಿಯಲ್ಲಿದ್ದು. ಇಲ್ಲಿಗೆ ಭಕ್ತ ಸಮೂಹವು ಹರಿದುಬರುತ್ತದೆ. ಈ ದೇವಾಲಯಕ್ಕೆ ಅಧ್ಯಕ್ಷರ ಆಯ್ಕೆಯಾಗಿದ್ದು, ಅವಿರೋಧವಾಗಿ ಡಿ.ಎಸ್ ವಿಶ್ವನಾಥ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಈ ಸಭೆಯ ರಾಮೇಶ್ವ ದೇವಸ್ಥಾನದ ಕಲ್ಯಾಣ ಮಂದಿರದಲ್ಲಿ ನೆರವೇರಿದ್ದು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ನಾಗಭೂಷಣ ಮತ್ತು ವರಲಕ್ಷೀಯವರು ಉಪಸ್ಥಿತರಿದ್ದರು. ಎಂಟು ಮಂದಿ ಸದಸ್ಯರು ಹಾಜರಿದ್ದರು. ನೂತನ ಅಧ್ಯಕ್ಷ ಮಾತನಾಡಿ, ದೇವಾಲಯದಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ, ದೇವಸ್ಥಾನದ ಖಾತೆಯಲ್ಲಿ ಸಾಕಷ್ಟು ಹಣವಿದ್ದು ಅದನ್ನು ದೇವಸ್ಥಾನದ ಕಾರ್ಯಗಳಿಗೆ ಸದುಪಯೋಗಿಸಬೇಕು ಹಾಗೆಯೇ ಅನುದಾನದ ಭರವಸೆಯನ್ನು ಮಲೆನಾಡು ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡರು ನೀಡಿದ್ದಾರೆ ಎಂದಿದ್ದಾರೆ.
ರಾಜಶೇಖರ್ ಭಟ್, ಎಚ್.ಆರ್ ಮಹಾಬಲ, ಪ್ರದೀಪ್, ಜ್ಯೋತಿ, ಪೂರ್ಣೇಶ್, ತ್ರಿವೇಣಿ ಸುರೇಶ್, ಹಾಲಿಗೆ ನಾಗರಾಜ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.