
ತೀರ್ಥಹಳ್ಳಿ: ತಾಲ್ಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ಸಮೀಪ ತೆಮ್ಮೆ ಮನೆ ಸರ್ಕಾರಿ ಶಾಲೆಯು 70 ವರ್ಷ ಇತಿಹಾಸವನ್ನು ಹೊಂದಿದ್ದು. ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡದಲ್ಲಿ ಅಲ್ಲಲ್ಲಿ ಸಿಮೆಂಟ್ನ ಪುಡಿಗಳು ಉದುರುತ್ತಿದ್ದು, ಗೋಡೆಗಳು ಬಿರುಕುಬಿಟ್ಟಿವೆ ಹಾಗೇಯೇ ಶಾಲೆಯ ಹಳೆಯ ಅಕ್ಷರ ದಾಸೋಹ ಕೊಠಡಿ ಸಂಪೂರ್ಣ ಬಿರುಕು ಬಿಟ್ಟಿದ್ದು ಇನ್ನೇನು ಬೀಳುವ ಹಂತವನ್ನು ತಲಪಿದೆ. ಒಂದು ವೇಳೆ ಕಟ್ಟಡ ಕುಸಿದರೆ ಕೆಳಗೆ ಇರುವ ಅಂಗನವಾಡಿ ಕೇಂದ್ರಕ್ಕೆ ಹಾನಿಯುಂಟಾಗುತ್ತದೆ.
ಮಕ್ಕಳ ಸುರಕ್ಷತೆಯ ದೃಷ್ಟಿಯನ್ನು ಗಮದಲ್ಲಿಟ್ಟುಕೊಂಡು ಶಾಲಾ ಶಿಕ್ಷಕರು ನಾಲೂರು ಗ್ರಾಮ ಪಂಚಾಯಿತಿಯವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ, ಸಿ.ಆರ್.ಪಿ ಯವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿಯನ್ನು ತೆಗೆದುಕೊಂಡು ಸೂಕ್ತ ವ್ಯವಸ್ಥೆ ಮಾಡಬೇಕಿದೆ.