
ತೀರ್ಥಹಳ್ಳಿ: ಗುಡ್ಡೆಕೊಪ್ಪ ಗ್ರಾಮದಲ್ಲಿ ಅಡಿಕೆ ಮರಗಳಿಗೆ ಕೊಳೆರೋಗ ಬಾರದಂತೆ ಔಷಧಿ ಸಿಂಪಡಿಸಲು ಸುಣ್ಣ ಮತ್ತು ರಾಳವನ್ನು ಮಿಶ್ರಣ ಮಾಡಿಟ್ಟಿದ್ದು, ಕಿಡಿಗೇಡಿಗಳು ಅದಕ್ಕೆ ವಿಷಕಾರಿ ಕೀಟನಾಶವನ್ನು ಬೆರಿಸಿದ್ದಾರೆ. ಇದನ್ನು ತಿಳೀಯದ ತೋಟದ ಮಾಲಿಕರಾದ ಶಂಕ್ರಪ್ಪನವರು ಔಷಧಿಯನ್ನು ಹೋಡೆಸಿದ್ದಾರೆ. ಎರಡ್ಮೂರು ದಿನಗಳ ಬಳಿಕ 300 ಕ್ಕೂ ಹೆಚ್ಚೂ ಮರಗಳು ಸುಟ್ಟು ಹೋಗಿದ್ದು, ಈ ಬಗ್ಗೆ ಪರೀಶಿಲಿಸಿದಾಗ ವಿಷಕಾರಿ ಕೀಟನಾಶಕ ಮಿಶ್ರಣವಾಗಿದೆ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿದ ಆಗುಂಬೆ ಠಾಣೆಯ ಪಿಎಸ್ಐ ಶಿನಗೌಡರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.