
ತೀರ್ಥಹಳ್ಳಿ: ಶಾಲಾ – ಕಾಲೇಜುಗಳಿಗೆ ಹೋಗುತ್ತಿದ್ದ ಮಕ್ಕಳು ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಘಟನೆಯೊಂದು ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ (ಜೂನಿಯರ್) ಕಾಲೇಜಿನಲ್ಲಿ ಕಂಡು ಬಂದಿದೆ. ಕಾಲೇಜಿಗೆ ಹೋಗುತ್ತೇನೆಂದು ಪೋಷಕರಿಗೆ ತಿಳಿಸಿ ಕಾಲೇಜಿಗೆ ಹೋಗದೆ ಬಸ್ ನಿಲ್ದಾಣ, ಪಾರ್ಕ್, ಬೇಕರಿ, ಕೆಫೆಗಳಲ್ಲಿ ಯುವಕರು ದಿನ ಕಳೆಯುತ್ತಿದ್ದು ಇದರ ಬಗ್ಗೆ ಸಾರ್ವಜನಿಕರು ಪ್ರಿನ್ಸಿಪಾಲರಿಗೆ ದೂರು ನೀಡಿದ್ದಾರೆ. ಇದನ್ನು ಮನಗಂಡ ಪ್ರಿನ್ಸಿಪಾಲರಾದ ಪ್ರೊ. ಸುಧಾರವರು ಖುದ್ದಾಗಿ ತಮ್ಮ ಸಿಬ್ಬಂದಿಯೊಂದಿಗೆ ಬಸ್ ನಿಲ್ದಾಣಕ್ಕೆ ಹೋಗಿ ಪರಿಶೀಲಿಸಿ ಕೆಲವು ಯುವಕರನ್ನು ಕಾಲೇಜಿಗೆ ಕರೆತಂದಿದ್ದಾರೆ. ನಂತರ ಈ ವಿಷಯದ ಬಗ್ಗೆ ಪೋಷಕರ ಗಮನಕ್ಕೆ ತಂದಿದ್ದು, ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕೆಂದು ಪೋಷಕರಿಗೆ ತಿಳಿಸಿದ್ದಾರೆ.