
ತೀರ್ಥಹಳ್ಳಿ: ಹಣಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಬಸವನಗದ್ದೆ ಸಮೀಪದ ಶಿರನಲ್ಲಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಯಡಿ ಕಳಪೆ ಕಾಮಗಾರಿ ಮಾಡಿದ್ದು ಹಣಗೆರೆ-ಶಿವಮೊಗ್ಗ ಹೋಗುವ ರಸ್ತೆಯ ಅರ್ಧ ಭಾಗ ಕುಸಿದಿದೆ. ಇದು ವಾಹನ ಸಂಚಾರರಿಗೆ ಭಯವನ್ನುಂಟುಮಾಡಿದೆ. ಆಯನೂರು- ಮಾಳೂರು ಮುಖ್ಯ ರಸ್ತೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ದೊಡ್ಡದಾದ ಟ್ರಂಚ್ಗಳನ್ನು ಹೊಡೆದಿದ್ದು ಸಂಜೆ ೬ಗಂಟೆಗೆ ಸರಿಸುಮಾರಿಗೆ ರಸ್ತೆ ಕುಸಿದಿದೆ. ತಕ್ಷಣ ಹಣಗೆರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಣಿಕಂಠ ಎಸ್ಡಿ ತಕ್ಷಣ ಪಿಡಿಒ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲಿಗೆ ಭೇಟಿ ನೀಡಿದ ಅಧಿಕಾರಿಗಳು ರಸ್ತೆಗೆ ಬ್ಯಾರಿಕೇಡ್ ಹಾಕಿಸಿದರು. ಇದಕ್ಕೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರವರಿಗೆ ಸ್ಥಳೀಯರು ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.