
ತೀರ್ಥಹಳ್ಳಿ: ನಿನ್ನೆ ತೀರ್ಥಹಳ್ಳಿಯ ಎರಡು ದೊಡ್ಡ ಗಣಪತಿಗಳ ವಿಸರ್ಜನಾ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ತೀರ್ಥಹಳ್ಳಿ ಪಟ್ಟಣದ ಛತ್ರಕೇರಿಯ ಶ್ರೀ ಸಿದ್ದಿವಿನಾಯಕ ಯುವಕ ಸಂಘ ಹಾಗೂ ಮೇಲಿನ ಕುರುವಳ್ಳಿಯ ಶ್ರೀ ವಿದ್ಯಾಗಣಪತಿ ಯುವಕ ಸಂಘದ ಎರಡು ಗಣಪತಿಗಳ ಸಮಾಗಮ ನೋಡುಗರ ಕಣ್ಮನ ಸೆಳೆಯಿತು. ಕಣ್ಣು ಹಾಯಿಸಿದಷ್ಟೂ ದೂರ ಜನ ಸಾಗರ ತುಂಬಿತ್ತು. ಯುವಕರು, ಯುವತಿಯರು ಸಂತೋಷದಿಂದ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎರಡು ಸಂಘದ ಗಣಪತಿಗಳು ಎದುರು ಬಂದಾಗ ಗಣಪತಿ ಎರಡು ಇರಬಹುದು, ಆದರೆ ಹಿಂದೂಗಳ ಆಚರಣೆಯ ವಿಚಾರದಲ್ಲಿ ನಾವೆಲ್ಲ ಒಂದೇ ಎಂದು ಸಂತೋಷದಿಂದ ಕೂಡಿ ಹಬ್ಬದ ಆಚರಣೆ ಮಾಡಲಾಯಿತು. ಸಾವಿರಾರು ಜನ ಸೇರುತ್ತಾರೆ ಎನ್ನುವ ಭೀತಿ ಸಾಮನ್ಯವಾಗಿ ಪೋಲಿಸರಲ್ಲಿರುತ್ತದೆ. ಆದರೆ ಪೋಲಿಸರು ಎರಡು ಗಣಪತಿಯ ಸಮಾಗಮನವನ್ನು ಸಂತೋಷದಿಂದ ವೀಕ್ಷಣೆ ಮಾಡಿ, ವಾಹನ ಓಡಾಟಕ್ಕೂ ಅನುವು ಮಾಡಿಕೊಟ್ಟಿದ್ದಾರೆ.