
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮರಡಿ ಹತ್ತಿರದ ಕೆಸಲೂರು ಗ್ರಾಮದ ಗದ್ದೆಗಳಲ್ಲಿ ಬೆಳೆದಂತ ಸಸಿಗಳನ್ನು ಕಾಡುಕೋಣಗಳ ಉಪಟಳದಿಂದಾಗಿ ಬೆಳೆಗಳು ಹಾನಿಯಾಗಿರುವ ಘಟನೆಯು ಸಂಭವಿಸಿದ್ದು, ರೈತರು ದಿಕ್ಕೆಟ್ಟು ಕಂಗಾಲಾಗಿದ್ದಾರೆ. ಕೃಷ್ಣಪ್ಪ ಹೆಚ್,ಸಿ, ಸುಂದರೇಶ್ ಹೆಚ್.ಡಿ ಎಂಬುವವರ ಗದ್ದೆಯು ನಾಶವಾಗಿದೆ ಎಂದು ತಿಳಿದು ಬಂದಿದೆ. ಒಂದೆಡೆ ಮಳೆರಾಯನ ಆರ್ಭಟದಿಂದ ನಲುಗಿದ್ದ ರೈತರು, ಇದೀಗ ಕಾಡುಪ್ರಾಣಿಗಳ ಹಾವಳಿಗೆ ಕಂಗೆಟ್ಟಿದ್ದಾರೆ. ಇದೀಗ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿಮಾರ್ಣವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ಒದಗಿಸುವ ಮೂಲಕ ರೈತರಿಗೆ ಆಧಾರವಾಗಬೇಕೆಂದು ರೈತರು ಅಳಲು ತೋಡಿಕೊಂಡಿದ್ದಾರೆ. ಮೇಗರವಳ್ಳಿ ವಲಯ ಅರಣ್ಯ ಅಧಿಕಾರಿಗಳಿಗೆ ಸೂಕ್ತ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆದರೆ ಘಟನೆ ನಡೆದು ದಿನ ಕಳೆದರು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಅರಣ್ಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಸರೆಯಾಗಬೇಕಿದೆ.