
ತೀರ್ಥಹಳ್ಳಿ: ಭೂ ಬ್ಯಾಂಕ್ ಸುಮಾರು 85 ವರ್ಷಗಳ ಪರಂಪರೆಯನ್ನು ಹೊಂದಿರುವ ತೀರ್ಥಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅತ್ಯುತ್ತಮ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದು ಈವರ್ಷವೂ ಸುಮಾರು 54 ಲಕ್ಷದ 73ಸಾವಿರ ರೂಪಾಯಿ ಲಾಭಗಳಿಸಿ ಬ್ಯಾಂಕಿನ ಷೇರುದಾರರ ವಿಶ್ವಾಸವನ್ನು ಮತ್ತೆ ದಾಖಲಿಸಿಕೊಂಡಿದೆ. ಈ ವರ್ಷವೂ ಶೇ.10ರಷ್ಟು ಲಾಭಾಂಶವನ್ನು ಷೇರುದಾರ ಸದಸ್ಯರಿಗೆ ಹಂಚಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ತೀರ್ಮಾನಿಸಿದೆ.
ರೈತರಿಗೆ ಸಕಾಲಕ್ಕೆ ಸಾಲವನ್ನು ನೀಡಿ ಕೃಷಿ ಚಟುವಟಿಕೆಗೆ ಆರ್ಥಿಕ ಭಧ್ರತೆ ನೀಡಿದೆ. ಹೊಸ ತೋಟ ನಿರ್ಮಿಸಲು, ಹಳೆಯ ತೋಟಗಳ ಅಭಿವೃದ್ಧಿ, ಬೇಲಿ ನಿರ್ಮಿಸಲು ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯವಿರುವ ಹಣ ಕಾಸು ನೀಡುವುದರಲ್ಲಿ ಮುಂಚೂಣಿಯಲ್ಲಿತ್ತು.
ಶಿವಮೊಗ್ಗ ಜಿಲ್ಲೆಯ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ತೀರ್ಥಹಳ್ಳಿ ಬ್ಯಾಂಕ್, ರಾಜ್ಯ ಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕ್ಗಳಲ್ಲಿ ಒಂದಾಗಿದ್ದು ನಬಾರ್ಡ್ ಪುರಸ್ಕೃತ ಪ್ರಾಥಮಿಕ , ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು ಬಂದಿದೆ.ಪ್ರೃತಿ ವೈಪರಿತ್ಯ, ಅನಾವೃಷ್ಠಿ, ಎಲೆಚುಕ್ಕಿರೋಗ, ಕೊಳೆರೋಗದಂತಹ ಸಮಸ್ಯೆಯಿಂದ ಆರ್ಥಿಕ ಅಸಮತೋಲನಗಳ ಮಧ್ಯೆಯೂ ಸಾಲ ಪಡೆದ ರೈತದ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯದ ಕೆಲವೇ ಲಾಭ ಪಡೆದಿರುವ ಬ್ಯಾಂಕ್ಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿನ ಸರ್ವಸದಸ್ಯರ ಮಹಾಸಭೆ ನಡೆಯಲಿದ್ದು, ಸದಸ್ಯರು ಸಕಾಲಕ್ಕೆ ಆಗಮಿಸುವಂತೆ ಅಧ್ಯಕ್ಷರು ವಿನಂತಿ ಮಾಡಿಕೊಂಡಿದ್ದಾರೆ. ಈ ವರ್ಷವೂ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮವನ್ನು ನಡೆಸುತ್ತಿದ್ದು. ಶೈಕ್ಷಣಿಕ ಕ್ಷೇತ್ರದಲ್ಲೂ ಬ್ಯಾಂಕ್ ತನ್ನ ಸಹಕಾರ ನೀಡುವ ಪ್ರಯತ್ನ ಮುಂದುವರಿಸಿದೆ.
ಮಾಜಿ ಅಧ್ಯಕ್ಷರಾಗಿದ್ದ ದಿ; ಬಿ.ಎಸ್ ವಿಶ್ವನಾಥರವರು ತೀರ್ಥಹಳ್ಳಿ ಭೂ ಬ್ಯಾಂಕಿಗೆ ನೀಡಿದ ನೆರವನ್ನು ಮರೆಯಲಾಗುವುದಿಲ್ಲ ಎಂದಿದ್ದಾರೆ. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಹಿರೇಗೋಡು ಶ್ರೀಧರಮೂರ್ತಿ ವ್ಯವಸ್ಥಾಪಕರಾದ ಸಂಜಯ್ ಬ್ಯಾಂಕಿನ ನಿರ್ದೇಶಕರು, ನೌಕರರ ಬಳಗ ಹಾಗೂ ಷೇರುದಾರರ ನಿರಂತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ಪ್ರತಿಷ್ಠಿತ ಸ್ಥಾನವನ್ನು ಪಡೆದಿದ್ದು. ಸಹಕರಿಸಿದ ಎಲ್ಲರಿಗೂ ವಿಜಯ್ದೇವ್ ರವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.