
ತೀರ್ಥಹಳ್ಳಿ: ಕಳೆದ 20 ವರ್ಷಗಳಿಂದ ತೀಥಧಹಳ್ಳಿ ತಾಲ್ಲೂಕು ಕಛೇರಿಯಲ್ಲಿ ಭ್ರಷ್ಟ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಬಡವರ ಸಮಸ್ಯೆಗಳು ಮುಗಿಯದಂತಾಗಿದೆ. ಕೆಲವು ವರ್ಷಗಳಿಂದ ಹಾಳಾಗಿರುವ ರಾಜಕೀಯ ವ್ಯವಸ್ಥೆಯಿಂದ ಕಛೇರಿಯಲ್ಲಿ ಗೂಟ ಹೊಡೆದು ಕುಳಿತಿರುವ ಭ್ರಷ್ಟಾಧಿಕಾರಿಗಳನ್ನು ಯಾರೂ ಪ್ರಶ್ನೆ ಮಾಡದಂತಾಗಿದೆ. ಕಛೇರಿಯಲ್ಲಿ ಸುಳ್ಳು ಭರವಸೆ ನೀಡಿ ಜನರಿಗೆ ವಂಚಿಸುತ್ತಿದ್ದಾರೆ. ಅಧಿಕಾರಿಗಳ ಲಂಚದ ದುರಾಸೆಯಿಂದ ಹಣ ಇದ್ದವರಿಗೆ ಮಾತ್ರ ಜಾಗ ಸಿಗುಂತಾಗಿದೆ. ತಮ್ಮ ಜಾಗವಿದ್ದರೂ ಕೂಡ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದ ಶಾಸಕರು ಕೂಡ ಮೌನ ವಹಿಸಿದ್ದಾರೆ.