
ಮನುಷ್ಯನಿಗೆ ದೇವರು ಅನ್ನೋದು ನಂಬಿಕೆಯ ವಿಷಯ, ಆದರೆ ತಾಯಿಯ ಪ್ರೀತಿಯನ್ನ ಅನುಭವಿಸಿದವನು ಅದನ್ನ ಅನುಭವಿಯಾಗಿ ಅರಿತಿರುತ್ತಾನೆ. ಗುಜರಾತ್ನ ವಿಮಾನದ ಭೀಕರ ದುರಂತದಲ್ಲಿ ತಾಯಿ ಮನೀಷಾ ಕಚ್ಚಡಿಯಾ ತಾನೇ ಪ್ರಾಣಾಪಾಯದಲ್ಲಿ ಸಿಲುಕಿದರೂ ತನ್ನ ಎಂಟು ತಿಂಗಳ ಮಗುವಾದ ಧ್ಯಾಂಶ್ನನ್ನು ರಕ್ಷಿಸುವ ಅಪರೂಪದ ಧೈರ್ಯ ತೋರಿಸಿದ್ದಾಳೆ. ಬೆಂಕಿಯ ಜ್ವಾಲೆಯೊಳಗೆ ಕೈ, ಕಾಲು, ಬೆನ್ನು ಸುಟ್ಟು ಹೋದರೂ ಮಗುವನ್ನು ಬಿಗಿಯಾಗಿ ಅಪ್ಪಿಕೊಂಡು ಸಾವನ್ನೇ ಸೋಲಿಸಿದ ಆಕೆ, ಹೆತ್ತ ತಾಯಿಯ ಪ್ರೀತಿಗೆ ಮಿತಿಯೇ ಇಲ್ಲ ಎಂಬುದನ್ನೊಮ್ಮೆ ಮತ್ತೊಮ್ಮೆ ಸಾಬೀತುಪಡಿಸಿದ್ದಾಳೆ. ವಿಮಾನ ಬಂದು ಬಿಲ್ಡಿಂಗ್ಗೆ ಅಪ್ಪಳಿಸಿ ಇಡೀ ಕಟ್ಟಡದೊಳಗೆ ಬೆಂಕಿ ಆವರಿಸಿದ್ದರೂ ತನ್ನ ಮಗುವಿಗಾಗಿ ನರಕದ ನಡುವೆ ಹೋರಾಡಿದ ಈ ಮಾತೆ, ಆಸ್ಪತ್ರೆಗೂ ಮಗುವನ್ನು ಸುರಕ್ಷಿತವಾಗಿ ತಲುಪಿಸಿದ್ದಾಳೆ. ಅಲ್ಲಿಯೂ ವೈದ್ಯರು ಮಗುವಿನ ಬದುಕುವುದು ಅನುಮಾನ ಎಂದರೂ, ತಾಯಿಯ ಛಲ ಮತ್ತು ಬದ್ಧತೆ ಮಗುವಿಗೆ ಮತ್ತೊಮ್ಮೆ ಜೀವವನ್ನೇ ತಂದುಕೊಟ್ಟಿದೆ. ಈಕೆಯ ಪ್ರೀತಿ, ತ್ಯಾಗ, ಧೈರ್ಯ , ‘ತಾಯಿಗಿಂತ ದೇವರಿಲ್ಲ’ ಅನ್ನೋ ಮಾತಿಗೆ ಜೀವಂತ ಸಾಕ್ಷಿಯಾಗಿದೆ.