
ತರೀಕೆರೆ: ತಿರುಓಣಂ ಹಬ್ಬವನ್ನು ೧೦ ದಿನಗಳ ಕಾಲ ಸಂಭ್ರಮದಿಂದ ಆಚರಿಸಿದ್ದಾರೆ. ತರೀಕೆರೆ ಪಟ್ಟಣ, ಲಕ್ಕವಳ್ಳಿ, ಹಲಸೂರು, ತಣಿಗೇಬೈಲು, ರೋಪ್ಲೈನ್, ವರ್ತೆಗುಂಡಿ, ಸಂತವೇರಿ, ತಿಮ್ಮನಬೈಲು ಇತರ ಗ್ರಾಮಗಳಲ್ಲಿ ಮಲಯಾಳಿ ಭಾಷೆಯವರು ಶುಕ್ರವಾರ ತಿರುವೋಣಂ ಹಬ್ಬವನ್ನು ಉತ್ಸಾಹದಿಂದ ಆಚರಿಸಿದ್ದಾರೆ. ಮನೆಯ ಮುಂಭಾಗದಲ್ಲಿ ಹೂವಿನ ರಂಗೋಲಿ ಹಾಕುವ ಮೂಲಕ (ಪೂಕಳಂ) ಸಂಭ್ರಮವನ್ನು ದುಪ್ಪಟ್ಟಾಗಿಸಿದ್ದಾರೆ, ಹಾಗೆಯೇ ಮಹಾಬಲಿ ಚಕ್ರವರ್ತಿಯನ್ನು ವಿಶೇಷವಾಗಿ ಪೂಜಿಸಿ ಮನೆಗೆ ಬರಮಾಡಿಕೊಂಡಿದ್ದಾರೆ. ಬಗೆ-ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಮನೆಯವರೆಲ್ಲ ಕೂಡಿ ಸವಿದಿದ್ದಲ್ಲದೇ ನೆರೆ-ಹೊರೆಯ ಮನೆಯವರು ಹಾಗೂ ಸಂಬಂಧಿಗಳಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ.