ಕೊಟ್ಟಿಗೆಹಾರ: 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ) ವತಿಯಿಂದ “ತೇಜಸ್ವಿ ಅವರಿಗೆ ಒಂದು ಪತ್ರ” ಎಂಬ ಹೆಸರಿನ ಕನ್ನಡ ಕೈಬರಹ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯ ಉದ್ದೇಶ ಯುವಪೀಳಿಗೆಯಲ್ಲಿ ಕನ್ನಡದ ಮೇಲಿನ ಆಸಕ್ತಿ ಮತ್ತು ಕೈಬರಹದ ಸೌಂದರ್ಯವನ್ನು ಉತ್ತೇಜಿಸುವುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಈ ಸ್ಪರ್ದೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾರ್ಥಿಗಳು ಪ್ರಖ್ಯಾತ ಸಾಹಿತ್ಯಿಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಿಗೆ ಉದ್ದೇಶಿಸಿದ ಕಾಲ್ಪನಿಕ ಪತ್ರವನ್ನು ತಮ್ಮ ಸ್ವಂತ ಕನ್ನಡ ಕೈಬರಹದಲ್ಲಿ ಎ4 ಗಾತ್ರದ ಹಾಳೆಯಲ್ಲಿ ಬರೆಯಬೇಕು ಕೈಬರಹದ ಮೂಲ ಪ್ರತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ; ಜೆರಾಕ್ಸ್ ಅಥವಾ ಪ್ರಿಂಟ್ ಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ. ಪತ್ರದೊಂದಿಗೆ ಸ್ಪರ್ಧಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ನಕಲು, ಪಾಸ್ಪೋರ್ಟ್ ಸೈಜಿನ ಪೋಟೊ ಮತ್ತು ಕೈಬರಹ ತಮ್ಮದೇ ಎಂಬ ಸ್ವಯಂ ಘೋಷಣಾ ಪತ್ರವನ್ನು ಲಗತ್ತಿಸಬೇಕು. ಈ ಪತ್ರವನ್ನು ನವೆಂಬರ್ 20 ರೊಳಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ), ಕೊಟ್ಟಿಗೆಹಾರ ಅಂಚೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ 577113 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಸ್ಪರ್ಧೆಯಲ್ಲಿ ಅತ್ಯುತ್ತಮ ಕೈಬರಹ ಮತ್ತು ಅತ್ಯುತ್ತಮ ಪತ್ರ ಎಂಬ ಎರಡು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳು ನೀಡಲಾಗುತ್ತವೆ. ಪ್ರಥಮ ಬಹುಮಾನ ₹ 5000, ದ್ವಿತೀಯ ₹3000 ಮತ್ತು ತೃತೀಯ ₹ 2000 ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ವಿಜೇತರ ಪಟ್ಟಿಯನ್ನು ನವೆಂಬರ್ 25 ರ ಸಂಜೆ 5 ಗಂಟೆಗೆ ತೇಜಸ್ವಿ ಪ್ರತಿಷ್ಠಾನದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9663098873 ಅಥವಾ 9449309067ಗೆ ಸಂಪರ್ಕಿಸಲು ತಿಳಿಸಲಾಗಿದೆ.
