
ಕುಂದಾಪುರ: ಗುಲ್ವಾಡಿ ಗ್ರಾಮದ ಮಾವಿನ ಕಟ್ಟೆ ಪ್ರೌಢಾಶಾಲೆಯು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೇರಿದ ಶಿಕ್ಷಕವೃಂದವನ್ನು ವರ್ಗಾಯಿಸಿ, ನೂತನ ಶಿಕ್ಷಕರನ್ನು ಆಯೋಜಿಸಲಾಗಿದೆ. ಇದು ವಿದ್ಯಾರ್ಥಿಗಳು ಹಾಗೂ ಪೋಷಕರ ತಲೆನೋವಿಗೆ ಕಾರಣವಾಗಿದೆ. ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ಕಲಿಕೆಗೆ ಬಹಳಷ್ಟು ತೊಂದರೆಯಾಗುವ ಸಾಧ್ಯತೆಯಿದ್ದು, ಮೊದಲಿದ್ದ ಎಲ್ಲಾ ಶಿಕ್ಷಕರನ್ನು ಮರು ನೇಮಕ ಮಾಡುಲು ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಮುಂದೆ ಕುಳಿತು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.
ಬೈಂದೂರು ಕ್ಷೇತ್ರದ ಶಿಕ್ಷಣಾಧಿಕಾರಿಯಾದ ನಾಗೇಶ್ ನಾಯ್ಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಗೂ ಪೋಷಕರ ಬೇಡಿಕೆಗಳನ್ನು ತಿಳಿದುಕೊಂಡು, ಆಡಳಿತ ಮಂಡಳಿ ಮತ್ತು ಉಪನಿರ್ದೇಶಕರಿಗೆ ಸಮಸ್ಯೆಯನ್ನು ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ. ಈ ಶಾಲೆಯು ೨೫ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಕಳೆದ ಹತ್ತು ವರ್ಷಗಳಿಂದ ಶೇಕಡಾ. ೧೦೦% ಫಲಿತಾಂಶವನ್ನು ತಂದು ಕೊಟ್ಟಿದ್ದು. ಮೂರು ದಿನದೊಳಗೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಗದಿದ್ದಲ್ಲಿ ಟಿ.ಸಿ ಪಡೆದು ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುವುದಾಗಿ ಪೋಷಕರು ಎಚ್ಚರಿಕೆಯನ್ನು ನೀಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರದಂತೆ ಈ ವರ್ಗಾವಣೆ ನಡೆದಿದೆ ಎನ್ನಲಾಗಿದೆ.