
ತರೀಕೆರೆ: ಒಂದು ಸೈನಿಕನು ತನ್ನ ರಾಷ್ಟ್ರದ ಹೆಮ್ಮೆಯಾಗಿರುತ್ತಾನೆ. ದೇಶಕ್ಕೋಸ್ಕರ ತನ್ನ ಜೀವವನ್ನು ಮುಡಿಪಾಗಿಸಿರುತ್ತಾನೆ. ಅಂತಹ ಯೋಧನಿಗೆ ಗೌರವ ನೀಡುವು ನಮ್ಮೆಲ್ಲರ ಕರ್ತವ್ಯವಾಗಿದ್ದು, ಬೆಟ್ಟದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವು ಯುವಜನತೆಗೆ ಸ್ಪೂರ್ತಿಯಾಗಿದೆ. ಮಕ್ಕಳು ಭಾರತೀಯ ಸೈನಿಕರ ವೇಷ-ಭೂಷಣ ಧರಿಸಿ ಎಲ್ಲರ ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಎ.ಶಬ್ಬೀರ್ ಹಾಗೂ ಜೆ.ಕುಮಾರ ಸ್ವಾಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೇನೆಯಲ್ಲಿ ಸೇವೆ ಸಲ್ಲಿಸುವುದು ಮಾತ್ರವಲ್ಲದೆ, ದೇಶದ ಋಣ ತೀರಿಸುವುದರಲ್ಲಿ ನಾವು ಭಾಗಿಯಾಗಬೇಕೆಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಚಂದ್ರಪ್ಪ, ನೂರ್ ಸಾದಿಕ್ ಮತ್ತು ಕುಸುಮಾ ಉಪಸ್ಥಿತರಿದ್ದರು.