ಕೊಳ್ಳೇಗಾಲ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಒಳ್ಳೆಯ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಫಾದರ್ ಪೌಲ್ ಕರೆ ನೀಡಿದರು.ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ರಾಷ್ಟ್ರೀಯ ಗ್ರಾಮೀಣ ಮಿಷನ್ ಸಂಸ್ಥೆ ಮತ್ತು ಉದ್ಯಮಿ ಗೌರಿಬಿದನೂರು ಡಾ. ಎ.ಸಿ . ನಾಗರಾಜು, ಅಭಿಮಾನಿ ಬಳಗಮತ್ತು ಬಿ.ಆರ್. ಟಿ. ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ, ವನ್ಯಜೀವಿ ವಲಯ ಕೊಳ್ಳೇಗಾಲರವರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವೆಟರ್ ವಿತರಣಾ ಕಾರ್ಯಕ್ರಮ ಮತ್ತು ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ, ಕಾಡ್ಗಿಚ್ಚು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜಕ್ಕಳ್ಳಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಕಾಡಂಚಿನ ಶಾಲೆಗಳನ್ನು ಗುರುತಿಸಿ ಶಿಕ್ಷಣಕ್ಕೆಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ವಿವಿಧ ಸಂಘ ಸಂಸ್ಥೆಗಳ ನೀಡುತ್ತಿದ್ದು ,ಅವುಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಲು ನಿಷ್ಠೆ ಮತ್ತು ಬದ್ಧತೆಯಿಂದ ಪ್ರಯತ್ನ ಮಾಡಬೇಕೆಂದು ಜೊತೆಗೆ ಮಾನವೀಯ ಮೌಲ್ಯಗಳನ್ನುಮೈಗೂಡಿಸಿಕೊಂಡು ಇತರರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನುಅನುಸರಿಸಿ ಎಂದುತಿಳಿಸಿದರು.ಮುಳ್ಳೂರು ನಾಗರಾಜು, ಅವರು ಮಾತನಾಡಿ ವಿದ್ಯೆ ಒಂದೇ ಯಾರೂ ಕದಿಯಲಾಗದ, ಸಂಪತ್ತಾಗಿದ್ದು, ಶ್ರದ್ಧೆಯಿಂದ ಕಲಿತು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಅವಶ್ಯಕ ವಸ್ತುಗಳನ್ನು ವಿತರಿಸುವ ಯೋಜನೆಯನ್ನು ಸಹ ರೂಪಿಸಿದ್ದು, ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಉಪ ವಲಯ ಅರಣ್ಯ ಅಧಿಕಾರಿ ಬಿ. ಅನಂತರಾಮು,ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ, ಕಾಡ್ಗಿಚ್ಚು ನಿಯಂತ್ರಣದ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಅರಣ್ಯದ ಮಹತ್ವವನ್ನುತಿಳಿಸಿ ಭವಿಷ್ಯದಲ್ಲಿ ಅರಣ್ಯ ವನ್ಯ ಜೀವಿಗಳಿಲ್ಲದೇ , ಮಾನವನು ಬದುಕು ನಡೆಸುವುದು ಕಷ್ಟ ಸಾಧ್ಯವಾಗುತ್ತದೆ.ಆದುದರಿಂದ ಮುಂದಿನ ಪೀಳಿಗೆಗೆ ಕಾಡನ್ನು ಉಳಿಸಬೇಕೆಂದು ತಿಳಿಸಿದರು. ಸ್ವೆಟರ್ ವಿತರಣೆ:- ತಿಮ್ಮರಾಜಿಪುರ, ಕರಾಳ ಕಟ್ಟೆ, ಜಕ್ಕಳ್ಳಿ, ಹಿತ್ತಲ ದೊಡ್ಡಿ, ಅರೇಪಾಳ್ಯ ಮತ್ತು ಎರೆಕಟ್ಟೆ ಗ್ರಾಮಗಳ ಅಂಗನವಾಡಿಗಳ ಮಕ್ಕಳು ಮತ್ತು ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 379ಸ್ವೆಟ್ಟರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಪುಟ್ಟಣ್ಣ, ಶೋಯಬ್ ಪಾಷಾ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರು ,ಮಹೇಶ್ ಕೆ.ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,ಮಧುವನಹಳ್ಳಿ ಕೃಷ್ಣಪ್ಪ ಮುಖ್ಯ ಶಿಕ್ಷಕಿ ಶಶಿಕಲಾ ಮುಖ್ಯ ಶಿಕ್ಷಕಿ ಕುಮಾರಿ , ಕರಾಳ ಕಟ್ಟೆ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀ, ಹಿತ್ತಲ ದೊಡ್ಡಿ ಶಾಲೆಯಕೆಂಪರಾಜು ,ಅರೇಪಾಳ್ಯ ಶಾಲೆಯ ಮುಖ್ಯ ಶಿಕ್ಷಕ ರಾಜು, ಎರೆಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ರಂಗ ರಾಜು, ಮಣಿಕಂಠ, ಹರೀಶ, ವೆಂಕಟ ರಂಗ ಶೆಟ್ಟಿ, ನಂದೀಶ್,ಗಸ್ತು ಅರಣ್ಯಪಾಲಕರಾದ ಸುನಿಲ್ ಬಸಪ್ಪ ಬೆಳವಿ, ಸಂಜುನಾಥ ಆಯಟ್ಟಿ, ರಾಜು ಎಸ್, ಸ್ಥಳೀಯ ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತೆಯರಾದ ನಿಂಗರಾಜಮ್ಮ, ಅನುಷಾ, ಎಲ್ಲಿ ಜೆಬತ್ಅರಸಿ, ಗೀತಾ, ಸಗಾಯ ಸೆಲ್ವಿ , ಸತೀಶ್, ಮಹೇಶ್, ಧನುಷ್ ,ಹಿರಣ್ಮಯಿ ಎ.ಆರ್. ಶಿಕ್ಷಕರು ಹಾಜರಿದ್ದರು.
