
ಮುಂಬೈನಲ್ಲಿ ನಡೆದ 31ನೆಯ ಎಂ.ಎಸ್.ಚಾಗ್ಲಾ ರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಸುನಿಧಿ ಹೆಗಡೆ ತಂಡ ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ. ಈ ತಂಡದಲ್ಲಿ ಶೃಂಗೇರಿ ತಾಲ್ಲೂಕಿನ ಹೆಗ್ಗದ್ದೆ ನಿವಾಸಿ ಮಮತಾ ಹಾಗೂ ಸುಬ್ರಹ್ಮಣ್ಯ ಸ್ವಾಮಿರವರ ಪುತ್ರ ಅನಿರುದ್ಧ ಕೂಡ ಪಾಲ್ಗೊಂಡು ಮಲೆನಾಡಿಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅನಿರುದ್ಧ ಹಾಗೂ ಸುನಿಧಿ ಇಬ್ಬರೂ ಕೂಡ ಶೃಂಗೇರಿಗೆ ನಂಟನ್ನು ಹೊಂದಿರುವುದು ವಿಶೇಷವಾಗಿದೆ. ಸುನಿಧಿಯವರು ಶಿರಸಿ ತಾಲ್ಲೂಕಿನ ಬೆಂಗಳೆ ಮೂಲದ ಹಿರಿಯ ಪೊಲೀಸ್ ಅಧಿಕಾರಿ ಶ್ರೀಯುತ ಸುಧೀರ್ ಎಮ್ ಹೆಡೆಯವರ ಪುತ್ರಿ. ಶ್ರೀಯುತ ಸುಧೀರ್ ಎಮ್ ಹೆಡೆಯವರು ಈ ಹಿಂದೆ ಶೃಂಗೇರಿಯಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಅಪಾರ ಜನ ಮನ್ನಣೆ ಗಳಿಸಿದ್ದರು. ಪ್ರಸ್ತುತ ಬೆಂಗಳೂರಿನ ಮಾನವ ಹಕ್ಕು ಆಯೋಗದಲ್ಲಿ (A.C.P) ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 30 ಕಾನೂನು ಕಾಲೇಜಿನ ಸ್ಪರ್ಧ ತಂಡ ಭಾಗವಹಿಸಿದ್ದು, ಇದು ಭಾರತದಲ್ಲಿ ಸಂವಿಧಾನಾತ್ಮಕ ಕಾನೂನು ಮೇಲಿನ ಶ್ರೇಷ್ಠ ಮಟ್ಟದ ಸ್ಪರ್ಧೆಯಾಗಿದೆ.