
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ. ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿವೆ ಎಂದು ತಿಳಿಸಲಾಗಿದೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ರಾಜ್ಯಾದ್ಯಂತ 1217 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಏಪ್ರಿಲ್ 7ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಪಿಯುಸಿ ವೇಳಾಪಟ್ಟಿಯಂತೆ ಫೆ.28ರಂದು ಕನ್ನಡ ಮತ್ತು ಅರೇಬಿಕ್, ಮಾ.2ರಂದು ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾ.3ರಂದು ಇಂಗ್ಲಿಷ್, ಮಾ.4 ತಮಿಳು,ತೆಲುಗು,ಮಲಯಾಳಂ, ಮರಾಠಿ,ಉರ್ದು,ಸಂಸ್ಕೃತ ಫ್ರೆಂಚ್, ಮಾ.5ರಂದು ಇತಿಹಾಸ, ಮಾ.6ರಂದು ಭೌತಶಾಸ್ತ್ರ, ಮಾ.7ರಂದು ಐಚ್ಛಿಕ ವಿಷಯಗಳು, ಮಾ.9ರಂದು ರಸಾಯನಶಾಸ್ತ್ರ ಮಾರ್ಚ್ 10- ಅರ್ಥಶಾಸ್ತ್ರ, ಮಾರ್ಚ್ 11- ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ , ಗೃಹ ವಿಜ್ಞಾನ, ಮಾರ್ಚ್ 12- ಹಿಂದಿ, ಮಾರ್ಚ್ 13- ರಾಜ್ಯಶಾಸ್ತ್ರ, ಮಾರ್ಚ್ 14- ಲೆಕ್ಕಶಾಸ್ತ್ರ, ಗಣಿತ, ಮಾರ್ಚ್ 16- ಸಮಾಜಶಾಸ್ತ್ರ,ಜೀವಶಾಸ್ತ್ರ,ಗಣಕ ವಿಜ್ಞಾನ, ಮಾರ್ಚ್ 17- ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ ವಿಷಯಗಳ ಪರೀಕ್ಷೆ ನಡೆಯಲಿವೆ.
ಎಸ್ಎಸ್ಎಲ್ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ: ಮೇ 18ರಿಂದ ಆರಂಭವಾಗಲಿರುವ ಎಸ್ಎಲ್ಎಲ್ಸಿ ಪರೀಕ್ಷೆ-2: ಮೇ 18 ಪ್ರಥಮ ಭಾಷೆ, ಮೇ 19 ವಿಜ್ಞಾನ, ಮೇ 20 ದ್ವೀತಿಯ ಭಾಷೆ, ಮೇ 21 ಗಣಿತ, ಮೇ 22 ತೃತೀಯ ಭಾಷೆ, ಮೇ 23 ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.




