
ಶೃಂಗೇರಿ: ಲೋ….. ಮಗಾ..ಇಲ್ಲಿ ಹೈಟ್ ಇದೆ ಕಣೋ… ಹತ್ತಕ್ಕಾಗಲ್ಲ.. ಆಕಡೆ ನೋಡೋಣ ಬಾ.. ಬೇಡ.. ಬೇಡ.. ಇಲ್ಲೂ ಬೇಡ… ಅಲ್ ಮುಂದಕ್ಕೆ ಹೋಗು ಎನ್ನುವಂತಿದೆ ಆನೆಗಳು. ತುಂಗಾ ನದಿಯಲ್ಲಿ ಈಜಿ ದಡ ಹತ್ತಲು ಆನೆಗಳ ಪರದಾಡುತ್ತಿವೆ. ಶೃಂಗೇರಿ ದೇವಸ್ಥಾನದ ಸಮೀಪದ ನದಿಯಲ್ಲಿ ಘಟನೆ ನಡೆದಿದ್ದು, ಒಂದು ಗುಂಪು ಕಾಡಲ್ಲಿದ್ದರೆ ಮತ್ತೊಂದು ಗುಂಪು ನಾಡಿಗೆ ಎಂಟ್ರಿ ನೀಡಿದೆ. ಶೃಂಗೇರಿ ಪಟ್ಟಣದ ನರಸಿಂಹವನದ ಸಮೀಪದ ಕಾಡಾನೆಗಳು ಪ್ರತ್ಯಕ್ಷವಾಗಿದೆ. ಕಾಡಾನೆ ಹಿಂಡು ಸಾಗಿದ ದಾರಿಯಲ್ಲೇ ಬರುತ್ತಿರುವ ಮತ್ತೊಂದು ಗುಂಪು. ಶೃಂಗೇರಿ ತಾಲ್ಲೂಕಿನ ಹೊಸಹಕ್ಲು, ಕುಂತೂರು ವ್ಯಾಪ್ತಿಯಲ್ಲಿರೋ ಆನೆಗಳು. ಆನೆಗಳು ಪಟ್ಟಣದ ಸಮೀಪವೇ ಇರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.