
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ಕಾಡಾನೆ ಇಬ್ಬರನ್ನು ಬಲಿ ಪಡೆದಿದ್ದು, ಬಾಳೆಹೊನ್ನೂರು – ಖಾಂಡ್ಯ ಬಂದ್ ಮಾಡಿ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಗಂಟೆಗಟ್ಟಲೆ ಚಿಕ್ಕಮಗಳೂರು – ಶೃಂಗೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ ಪ್ರತಿಭಟನೆ ನಡೆಯುತ್ತಿರುವಾಗಲೇ ಸ್ಥಳಕ್ಕೆ ಶಿವಮೊಗ್ಗದ ಸಕ್ರೆಬೈಲಿನಿಂದ ೪ ಕುಮ್ಕಿ ಆನೆಗಳನ್ನು ಕರೆಸಿ ಒಂದು ಆನೆಯನ್ನು ಮಾತ್ರ ಸೆರೆಹಿಡಿದಿದ್ದು, ಇನ್ನುಳಿದ ಎರಡು ಆನೆಗಳು ನಿನ್ನೆ ಶೃಂಗೇರಿಯ ವೈಕುಂಟಪುರದಲ್ಲಿದ್ದ್ದು, ಇಂದು ವಿದ್ಯಾರಣ್ಯಪುರದ ಬಳಿ ಕಾಣಿಸಿಕೊಂಡಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಕಾಡಾನೆಗಳು ಇನ್ನಷ್ಟು ಜನರನ್ನು ಬಲಿ ಪಡೆದುಕೊಳ್ಳುತ್ತದೆ. ಇದು ಪ್ರಮುಖವಾಗಿ ಅರಣ್ಯ ಇಲಾಖೆಯ ಬೇಜವಾಬ್ದಾರಿಯನ್ನು ತೋರಿಸುವ ನಿದರ್ಶನವಾಗಿದೆ.