
ಶೃಂಗೇರಿ: ಕಾರ್ಮಿಕರ ಪರವಾಗಿ ಕಾರ್ಮಿಕ ಸಂಘದ ಅಧ್ಯಕ್ಷರಾದ ರಮೇಶ್ ಶೂನ್ಯರವರು ಸೋಮವಾರ ತಾಲ್ಲೂಕು ಕಛೇರಿಯಲ್ಲಿ ಉಪ ತಹಸಿಲ್ದಾರರಾದ ಪ್ರವೀಣ್ ಕುಮಾರ್ರವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜಂಬಿಟ್ಟಿಗೆ ಉತ್ಪಾದನೆ ಕಡಿತಗೊಂಡಿದ್ದು ಕಟ್ಟಡ ಕಾರ್ಮಿಕರ ಹಿತ ದೃಷ್ಠಿಯಿಂದ ಮತ್ತೆ ಆರಂಭ ಮಾಡಬೇಕು ಎಂದು ತಾಲ್ಲೂಕು ಕಾರ್ಮಿಕರ ಸಂಘದವರು ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದೆ. ಈಗಾಗಲೇ ಕೆಂಪು ಕಲ್ಲು ಕೊರತೆಯುಂಟಾಗಿದ್ದು ಕೆಂಪು ಕಲ್ಲಿನ ದರಕ್ಕಿಂತ ಇತರ ಇಟ್ಟಿಗೆಗಳ ಬೆಲೆ ಹೆಚ್ಚಾಗಿದೆ.