
ಶೃಂಗೇರಿ: ನಿನ್ನೆ ರಾತ್ರಿ 9:30 ರ ಸುಮಾರಿಗೆ ತಾಲ್ಲೂಕಿನ ಉಳುವೆಬೈಲು ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿ ವಾಹನಕ್ಕೆ ಹುಲಿಯೊಂದು ಅಡ್ಡ ಬಂದಿರುವ ಘಟನೆ ವರದಿಯಾಗಿದೆ. ಆತಂಕಗೊಂಡ ಪ್ರವಾಸಿಗರು ಅದೇ ಸಮಯದಲ್ಲಿ ಅಲ್ಲಿಗೆ ಬೈಕ್ ನಲ್ಲಿ ಬರುತ್ತಿದ್ದ ಸ್ಥಳೀಯರಿಗೆ ತಿಳಿಸಿದ್ದಾರೆ. ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದು ಪರಿಶೀಲಿಸಿದಾಗ ಹುಲಿಯ ಹೆಜ್ಜೆ ಗುರುತುಗಳಿರುವುದು ಕಂಡು ಬಂದಿದೆ. ಹುಲಿ ಪಕ್ಷಿಧಾಮ ಕೆರೆಯಿಂದ ನೀರು ಕುಡಿದು ಕೋರೆಕಲ್ಲು ಮೀಗಿನಕಲ್ಲು ಕಡೆ ಹೋಗಿರಬಹುದು ಎಂದು ಶಂಕಿಸಲಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.