ಶೃಂಗೇರಿ: ಕಳೆದ ಹಲವು ವರ್ಷಗಳಿಂದ ಜಗದ್ಗುರುಗಳ ಪರಮಾನುಗ್ರಹದಿಂದ ಬಹಳ ವಿಜೃಂಭಣೆಯಿಂದ ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ 2001ರಿಂದ ಸಮಿತಿಯ ಮುಖೇನ ಲಕ್ಷದೀಪೋತ್ಸವ ನಿರಂತರವಾಗಿ ಜರುಗುತ್ತಿದ್ದು 24 ಸಂವತ್ಸರಗಳನ್ನು ಪೂರೈಸಿ ಗುರುಗಳ ಅನುಗ್ರಹದ ಜೊತೆಗೆ ಈ ಬಾರಿ ರಜತ ಮಹೋತ್ಸವವು ನೆರವೇರುತ್ತಿದೆ. ವಿಶೇಷವಾಗಿ ಕಾಶಿಯಲ್ಲಿ ನಡೆಯುವ ಗಂಗಾರತಿಯಂತೆ ಶೃಂಗೇರಿಯಲ್ಲಿ ತುಂಗಾರತಿಯನ್ನು ನಡೆಸಲಾಗುತ್ತದೆ. ಇದೇ ಕಾರ್ತೀಕ ಹುಣ್ಣಿಮೆಯ ದಿನದಂದು ಲಕ್ಷದೀಪೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಜ್ಞಾನದ ಸಂಕೇತವಾಗಿರುವ ಜ್ಯೋತಿಯನ್ನು ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ಅವರು ಈಶ್ವರಗಿರಿಯ ಶ್ರೀ ಮಲಹಾನಿಕರೇಶ್ವರ ದೇವರ ಸನ್ನಿದಿಯಲ್ಲಿ ಬೆಳಗಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡುತ್ತಾರೆ. ಸಂಜೆ 6ರಿಂದ-10ರವರೆಗೆ ಭರತನಾಟ್ಯ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಸುಸಂದರ್ಭಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
