
ಶೃಂಗೇರಿ: ಲಕ್ಷ ದೀಪೋತ್ಸವದ 25ನೇ ವರ್ಷದ ಸಂಭ್ರಮದ ಆಚರಣೆಯ ಆಹ್ವಾನ ಪತ್ರಿಕೆಯನ್ನು ಶ್ರೀ ಮಠದ ಆಡಳಿತಾಧಿಕಾರಿಗಳಾದ ಶ್ರೀಯುತರಾದ ಶ್ರೀ ಪಿ.ಎ ಮುರುಳಿಯವರು ಬಿಡುಗಡೆ ಮಾಡಿದರು. ಲಕ್ಷ ದೀಪೋತ್ಸವ ಸಮಿತಿಯಿಂದ 2001 ರಿಂದ 2024ರವರೆಗೆ ವಿಜೃಂಭಣೆಯಿಂದ ನಡೆಯುತ್ತಾ ಬಂದಿದ್ದು, ಈ ವರ್ಷ ಅಂದರೆ 2025 ರಜತ ಮಹೋತ್ಸವ ಸಂಭ್ರಮವನ್ನು ಆಚರಿಸುತ್ತಿದೆ. ವಿಶೇಷವಾಗಿ ಈ ವರ್ಷ ೨ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಿದೆ.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಬಿ.ಎಸ್ ಬಾಲಗಂಗಾಧರ್, ಹೆಚ್.ಎಲ್ ತ್ಯಾಗರಾಜ್, ಹೆಚ್. ವಿಶ್ವನಾಥ್, ಡಾ|| ಲಕ್ಷೀನಾರಾಯಣ, ಗಿರೀಶ್ ಉಳುವೆ ಹಾಗೂ ವಿಶ್ವೇಶ್ವರ ಅವರು ಪಾಲ್ಗೊಂಡಿದ್ದರು.