
ಶೃಂಗೇರಿ: ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಅಂಚೆಯ ಭಲೇಕಡಿ ಗ್ರಾಮದ ಹುಲುಗಾರುಬೈಲಿನಲ್ಲಿ ಮಳೆ ಹೆಚ್ಚಾದ್ದರಿಂದ ಕಾಲುಸಂಕವು ಮರ ಸಮೇತವಾಗಿ ಬಿದ್ದಿದೆ. ಇದರಿಂದಾಗಿ ಅಲ್ಲಿನ ನಿವಾಸಿಗಳು ನದಿ ದಾಟಲು ಪರದಾಡುವಂತಾಗಿದೆ. ಅಲ್ಲಿನ ನಿವಾಸಿಗಳಾದ ಗೌಡಲು ಜನಾಂಗದ ಭಾಸ್ಕರ ಗೌಡ್ರು ಹಾಗೂ ಪ್ರಭಾಕರ ಮನೆಗೆ ಹೋಗಲು ಬೇರೆ ದಾರಿ ಇಲ್ಲದೆ ಓಡಾಡಲು ಕಷ್ಟಕರವಾಗಿದೆ. ಇಂದು ಭಾಸ್ಕರ ಗೌಡ್ರ ಮಗ ಸಂತೋಷ್ ಹೆಚ್.ಬಿ ಸುಜಾತ ಎನ್ ದಂಪತಿಗಳ ಒಂದೂವರೆ ತಿಂಗಳ ಮಗುವಿಗೆ ಲಸಿಕೆಯನ್ನು ಕೊಡಿಸಲು ಆಸ್ಪತ್ರೆಗೆ ಕರೆತರಲು ಹೊಳೆ ದಾಟಲು ಪರದಾಡಿದ್ದಾರೆ. ಇಲ್ಲಿನ ಜನರು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.