
ಶೃಂಗೇರಿ:ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಂದರೂ ಗೋಕಳ್ಳತನ ಹಾಗೂ ಅಕ್ರಮ ಸಾಗಾಟ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 447 ಗೋ ಕಳ್ಳತನ ಪ್ರಕರಣ ಹಾಗೂ 657 ಗೋ ಅಕ್ರಮ ಸಾಗಾಟ ಪ್ರಕರಣಗಳು ದಾಖಲಾಗಿವೆ.
ಶೃಂಗೇರಿಯ ಹರಾವರಿ ಸಮೀಪದಿಂದ ತೀರ್ಥಹಳ್ಳಿಯ ಹೊಸನಗರಕ್ಕೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಿಗ್ಗಾ ಘಟಕದ ವಿಶ್ವ ಹಿಂದೂ ಪರಿಷತ್,ಭಜರಂಗದಳದ ಕಾರ್ಯಕರ್ತರು ಬೇಗಾರ್ ಸಮೀಪ ಅಡ್ಡಗಟ್ಟಿ ಗೋವುಗಳನ್ನು ರಕ್ಷಿಸಿದ್ದಾರೆ. ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಚಾಲಕ ಕುಮಾರ್ ಹಾಗೂ ಸುರೇಶರ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ತಾಲ್ಲೂಕು ರಕ್ಷಕ ಸುನೀಲ್, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಂಚಾಲಕ ದಿವೀರ್ ಮಲ್ನಾಡ್, ಕಾರ್ಯಕರ್ತರಾದ ಅಖಿಲೇಶ್, ಮಧ್ವರಾಜ್ ಬೇಗಾರು ಭಾಗದ ಕಾರ್ಯಕರ್ತರಿದ್ದರು.