
ಧರೆಕೊಪ್ಪ: ರಾಜ್ಯ ಸರ್ಕಾರದ ಜನ ವಿರೋಧಿ ಕೆಲಸಗಳನ್ನು ವಿರೋಧಿಸಿ ಶೃಂಗೇರಿ ಮಂಡಲ ಭಾರತೀಯ ಜನತಾ ಪಾರ್ಟಿ, ಧರೆಕೊಪ್ಪ ಶಕ್ತಿ ಕೇಂದ್ರದ ವತಿಯಿಂದ ಆ ಭಾಗದ ಎಲ್ಲಾ ಗ್ರಾಮಗಳ ಸಮಸ್ತ ಗ್ರಾಮಸ್ಥರ ಪರವಾಗಿ ಇಂದು ಧರೆಕೊಪ್ಪ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗಿದೆ
ಗ್ರಾಮ ಪಂಚಾಯಿತಿ ಮೂಲಕ ಜನರಿಗೆ ತಲುಪಬೇಕಾದ ಸರ್ಕಾರದ ಯೋಜನೆಗಳು ಸರಿಯಾಗಿ ತಲುಪದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದ್ದು. ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ರಸ್ತೆ ದುರಸ್ತಿ, ೯೪ಸಿ ಹಕ್ಕು ಪತ್ರ ವಿತರಣೆ ಮಾಡದಿರುವುದು, ಹಾಗೂ 50, 53 ಅರ್ಜಿಗಳು ಪಾಸಾಗಿದ್ದರೂ ಈ ವರೆಗೆ ಪಹಣಿಯನ್ನು ನೀಡಿರುವುದಿಲ್ಲ. ಫಲಾನುಭವಿಗಳಿಗೆ ವಸತಿ ಮತ್ತು ನಿವೇಶನ ಹಂಚಿಕೆಯಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕಛೇರಿಗಳಲ್ಲಿ ಹಲವು ಭ್ರಷ್ಟಾಚಾರಗಳು ನಡೆಯುತ್ತಿದ್ದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಪ್ರತಿಭಟನೆ ನಡೆಸಲಾಗಿದ್ದು.
ರಾಜ್ಯ ಸರ್ಕಾರದಲ್ಲಿ ಅಪವಾದಕ್ಕೆ ಗುರಿಯಾದಂತಹ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದು.
ಭಾರತೀಯ ಸೇನೆಯ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಸಚಿವ ಸಂತೋಷ್ ಲಾಡ್ ಅವರನ್ನು ತಕ್ಷಣ ಸಂಪುಟದಿಂದ ತೆಗೆಯಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದಿಂದ ಗ್ರಾಮೀಣ ಭಾಗದ ರೈತರಿಗೆ ಕಿಸಾನ್ ಸನ್ಮಾನ್ ಹಣ ಹಾಗೂ ಅಡಿಕೆ ಮತ್ತು ಕಾಫಿ ಬೆಳೆಗಳಿಗೆ ಬಂದಿರುವ ಕೊಳೆ ರೋಗಕ್ಕೆ ತತ್ಕ್ಷಣ ಬೆಳೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದು.
ಅರಣ್ಯ ಇಲಾಖೆಯವರಿಂದ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ ಹಾಗೆಯೇ ಜಲ ಜೀವನ್ ಮಿಷನ್ ಕಾರ್ಯಕ್ರಮ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿದರು.
ಶೃಂಗೇರಿ ವಿಧಾನಸಭಾ ಸದಸ್ಯರಾಗಿರುವ ಟಿಡಿ ರಾಜೇಗೌಡರ ನಿರಾಸಕ್ತಿಯಿಂದ ತಾಲ್ಲೂಕಿನ ಆಡಳಿತ ಸಂಪೂರ್ಣ ಕುಸಿದಿರುವುದರ ವಿರುದ್ಧ ಹೋರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಲಗಾರು ಉಮೇಶ್, ಚೇತನ್ ಹೆಗ್ಡೆ, ಶಿಲ್ಪಾ ರವಿ, ರಾಘವೇಂದ್ರ ಹಂಚಲಿ, ಸುರೇಶ್ ಜಟಿಗೇಶ್ವರ ಇತರರು ಉಪಸ್ಥಿತರಿದ್ದರು.