
ಶೃಂಗೇರಿ: ಕಾರ್ಕಳದಿಂದ ಶೃಂಗೇರಿಗೆ ಆಗಮಿಸುತ್ತಿದ್ದ ಕಾರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರೋ ಶೃಂಗೇರಿ ತಾಲ್ಲೂಕಿನ ಗುಲಗಂಜಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪ ನದಿಗೆ ಕಾರು ಬಿದ್ದಿರುವ ಘಟನೆ ನಡೆದಿದೆ. ಉಪ ನದಿಯ ತಡೆಗೋಡೆ ಮುರಿದು ಕಾರು ನದಿಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಘಟನೆ ನಡೆದಿದೆ. ರಾತ್ರೀ ಕಾರ್ಕಳದಿಂದ ಶೃಂಗೇರಿಗೆ ಆಗುಮಿಸುತ್ತಿದ್ದ ನಾಲ್ವರು, ಪವಾಡಸದೃಷ ಪಾರಾಗಿದ್ದಾರೆ ಎನ್ನಲಾಗಿದೆ. ಶೃಂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.