
ವಾರಣಾಸಿ: ವಿಜಯಯಾತ್ರೆ ಕೈಗೊಂಡಿರುವ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಜನವರಿ 29 ರ ಮೌನಿ ಅಮವಾಸ್ಯೆ ದಿನದಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಕಾಶಿಗೆ ತೆರಳಿದ್ದಾರೆ. ಅಂತೆಯೇ ನಿನ್ನೆ ದಿನಾಂಕ 07-02-25 ರಂದು ಕಾಶಿಯ ಅನ್ನಪೂರ್ಣೇಶ್ವರಿ ದೇವಾಲಯದ ಮಹಾಕುಂಭಾಭಿಷೇಕ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಸಂನ್ಯಾಸ ಸ್ವೀಕಾರ ಸುವರ್ಣ ಸಂಭ್ರಮದ ಅಂಗವಾಗಿ ಕಾಶಿ ಅನ್ನಪೂರ್ಣೇಶ್ವರಿ ದೇವಾಲಯದ ಅನ್ನದಾನ ಸೇವೆಗೆ ಶೃಂಗೇರಿ ಸಂಸ್ಥಾನದಿಂದ 50 ಲಕ್ಷ ರೂ ಮೊತ್ತದ ಚೆಕ್ ನ್ನು ದೇವಾಲಯದ ಆಡಳಿತಾಧಿಕಾರಿ ಶಂಕರಪುರಿ ಮಹಂತರಿಗೆ ಹಸ್ತಾಂತರಿಸಿದ್ದಾರೆ.