ಶೃಂಗೇರಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ರೈತ ಉತ್ಪಾದಕ ಕಂಪನಿಯು ನಬಾರ್ಡ ಸಹಭಾಗಿತ್ವದೊಂದಿಗೆ ತಾಲ್ಲೂಕಿನಲ್ಲಿ ಮಂಜುನಾಥ ಮಾಗೋಡು ಮರ್ಕಲ್ ಗ್ರಾಮ ಶೃಂಗೇರಿ ತಾಲ್ಲೂಕು ಇವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡು, ಪ್ರಶಾಂತ.ಕೆ ಸದಸ್ಯರು, ಮರ್ಕಲ್ ಗ್ರಾಮಪಂಚಾಯತಿ, ಕಲ್ಮಕ್ಕಿ ಹಾಗೂ ಇನ್ನೂ 600ಕ್ಕೂ ಅಧಿಕ ಜನ ರೈತ ಷೇರುದಾರರನ್ನು ಹೊಂದಿತ್ತು. ಈ ಸಂಸ್ಥೆಯು 2022-23 ನೇ ಸಾಲಿನಿಂದ ಶೃಂಗೇರಿ ಪಟ್ಟಣದಿಂದ ಕಛೇರಿಯು ಕಣ್ಮರೆಯಾಗಿದ್ದು, ಇದರ ಬಗ್ಗೆ ಸಂಬಂಧ ಪಟ್ಟವರನ್ನು ಕೇಳಿದರೆ ಸೂಕ್ತ ಮಾಹಿತಿ ನೀಡದೆ ಎಲ್ಲರಿಗೂ ವಂಚಿಸಿ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಈವರೆಗೆ ಯಾವುದೆ ರೀತಿಯ ಲೆಕ್ಕ ಪರಿಶೋಧನೆ ಹಾಗೂ ವಾರ್ಷಿಕ ಮಹಾಸಭೆಯನ್ನೂ ನಡೆಸದೆ, ರೈತರ ಷೇರು ಹಾಗೂ ನಬಾರ್ಡ್ ಸಹಾಯಧನ ದುರುಪಯೋಗ ಪಡಿಸಿಕೊಂಡು ವಂಚಿಸಿರುವ ಕಂಪನಿಯ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
