
ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಕೃಷ್ಣನು ಹುಟ್ಟಿದ ದಿನವಾಗಿದೆ. ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖವಾಗಿದ್ದು, ಕೃಷ್ಣನ ಜನ್ಮಸ್ಥಳ ಮಥರಾ. ದೇವಕಿ ಹೆತ್ತ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಸಲಹಿದ ತಾಯಿ.
ಜನ್ಮಾಷ್ಟಮಿಯ ದಿನದಂದು ಕೃಷ್ಣನ ಹೆಜ್ಜೆಯನ್ನು ರಂಗೋಲಿಯ ಮುಖಾಂತರ ಬರೆದು ಸಂಭ್ರಮಿಸಲಾಗುತ್ತದೆ. ಮನೆ ಮತ್ತು ದೇವಾಯಗಳನ್ನು ಸುಂದಾರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವೈಭವ ಪೂರ್ಣವಾಗಿ ಅಲಂಕರಿಸಿ, ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ. ಸಣ್ಣ-ಸಣ್ಣ ಮಕ್ಕಳಿಗೆ ರಾಧೆ ಹಾಗೂ ಕೃಷ್ಣನ ವೇಷವನ್ನು ಧರಿಸಿ ಕಣ್ತುಂಬಿಕೊಳ್ಳುತ್ತಾರೆ. ಹಾಗಯೇ ಬಗೆ-ಬಗೆಯ ತಿಂಡಿ ತಿನಸುಗಳನ್ನು ಮಾಡಲಾಗುತ್ತದೆ. ಮೊಸರು ಕುಡಿಕೆ ಮುಂತಾದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳಿರುತ್ತದೆ.