
ಬೆಂಗಳೂರು: ದುರ್ಗಾದೀಪ ನಮಸ್ಕಾರ, ಹೆಸರೇ ಹೇಳುವ ಹಾಗೆ ತಾಯಿ ದುರ್ಗೆಯನ್ನು ಆರಾಧಿಸುವ ಒಂದು ವಿಶಿಷ್ಟ ಪೂಜೆಯೇ ದುರ್ಗಾ ದೀಪ ನಮಸ್ಕಾರ ಇದನ್ನು ಭಗವತಿ ಪೂಜೆ ಎಂದೂ ಕರೆಯುತ್ತಾರೆ. ಅತ್ಯಂತ ಶಕ್ತಿಶಾಲಿ ದೇವರುಗಳಲ್ಲಿ ದುರ್ಗೆ ಅಥವಾ ಕಾಳಿಯೂ ಒಂದು ಇವಳನ್ನು ಆರಾಧಿಸಿದರೆ ಎಂಥಹ ಕಷ್ಟ ಕಾರ್ಪಣ್ಯಗಳು ತೀರುತ್ತವೆ, ಅಷ್ಟೊಂದು ಶಕ್ತಿಶಾಲಿಯಾದವಳು ಎಂಬುದು ಭಕ್ತರ ನಂಬಿಕೆ. ಹಾಗಾಗಿ ದುಗಾಂಭೆ ಎಂದರೆ ಎಂಥವರಿಗೂ ಭಯ ಭಕ್ತಿ. ಈ ದುರ್ಗಾ ದೀಪ ನಮಸ್ಕಾರದಲ್ಲಿ ಮಂಡಲ ಬರೆದು ಮಧ್ಯೆ ದೊಡ್ಡ ದೀಪ ಇಟ್ಟು ಅವಳನ್ನು ಪೂಜಿಸಲಾಗುತ್ತದೆ. ಈ ಪೂಜೆಯಲ್ಲಿ ಮಂತ್ರದೊಂದಿಗೆ ಅವಳ ವಿವಿಧ ರೂಪವನ್ನು ಹಾಡುವ ಮೂಲಕ ಭಕ್ತ ಭಾವದಲ್ಲಿ ಮಿಂದೇಳುವಂತೆ ಮಾಡುತ್ತದೆ.
ಮಹಾಲಕ್ಷ್ಮೀ ಪುರ ಬ್ರಾಹ್ಮಣ ಮಹಾಸಭಾದ 19ನೇ ವಾರ್ಷಿಕೋತ್ಸವ ಅಂಗವಾಗಿ ಡಿಸೆಂಬರ್ 25 ರ ಬುಧವಾರ ಸಂಜೆ 5:30 ಕ್ಕೆ ಹಿಂದೂ ಸಾದರ ಸಮುದಾಯ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ, ವೈಭವೋಪೇತವಾಗಿ, ವಿನೂತನವಾಗಿ ಶ್ರೀ ದುರ್ಗಾ ದೀಪ ನಮಸ್ಕಾರವನ್ನು ಏರ್ಪಡಿಸಲಾಗಿದ್ದು, ಈ ಸುಸಂದರ್ಭದಲ್ಲಿ ಉಡುಪಿಯ ಪೇಜಾವರ ಶ್ರೀಗಳವರು ದಿವ್ಯ ಸಾನ್ನಿಧ್ಯ ವಹಿಸಿ ಭಕ್ತರನ್ನು ಹರಸಲಿದ್ದಾರೆ. ಎಲ್ಲಾ ಸದ್ಭಕ್ತರು ದುರ್ಗಾದೀಪ ನಮಸ್ಕಾರಕ್ಕೆ ಆಗಮಿಸಿ ಅಮ್ಮನವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಸಭಾದ ಅಧ್ಯಕ್ಷರಾದಂಥ ಶ್ರೀ ರಾಘವೇಂದ್ರ ಭಟ್ ವಿನಂತಿಸಿದ್ದಾರೆ. ಹಾಗೆ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಶ್ರೀ ಗೋಪಾಲಯ್ಯ ದಂಪತಿಗಳು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀಯತ ಅಶೋಕ ಹಾರನಹಳ್ಳಿಯವರು ಉಪಸ್ಥಿತರಲಿದ್ದಾರೆ.