ಸ್ಮಾರ್ಟ್ ಫೋನ್ : ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್ ಫೋನ್ಗಳು ನಮ್ಮ ದೈನಂದಿನ ಜೀವನದ ಅಂಶವಾಗಿದ್ದು ಬೆಳಗ್ಗೆ ಎದ್ದು ರಾತ್ರಿ ಮಲಗುವವರೆಗೆ ನಾವು ಮೊಬೈಲ್ ಪರದೆಯತ್ತ ನೋಡುವ ಅಭ್ಯಾಸ ಹೊಂದಿದ್ದೇವೆ. ಆದರೆ ಈ ಸ್ಮಾರ್ಟ್ ಫೋನ್ಗಳ ಅತಿಯಾದ ಬಳಕೆ ಕಣ್ಣಿನ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುವುದರ ಜೊತೆಗೆ ಮೊಬೈಲ್ ಪರದೆಯಿಂದ ಹೊರಹೊಮ್ಮುವ ನೀಲಿ ಬೆಳಕು ಕಣ್ಣಿನ ಒಳಗಿನ ರೆಟಿನಾ ಮೇಲೆ ದುಷ್ಪರಿಣಾಮ ಬೀರಲಿದ್ದು, ಇದರಿಂದ ಕಣ್ಣು ಸುಡುವುದು, ನೀರುಬರುವುದು, ದೃಷ್ಟಿಯ ಅಸ್ಪಷ್ಟತೆ ಮತ್ತು ಕೆಲವೊಮ್ಮೆ ತಲೆನೋವಿನಂತಹ ತೊಂದರೆ ಕಾಣಿಸಿಕೊಳ್ಳುತ್ತದೆ. ಇವುಗಳ ಜೊತೆಗೆ ದೀರ್ಘ ಕಾಲದ ಮೊಬೈಲ್ ಬಳಕೆಯಿಂದ “ಡಿಜಿಟಲ್ ಸ್ಟ್ರೇನ್” ಅಥವಾ ಕಣ್ಣಿನ ಒತ್ತಡದ ಸಮಸ್ಯೆ ಉಂಟಾಗಲಿದ್ದು, ರಾತ್ರಿ ಸಮಯದಲ್ಲಿ ಸ್ಮಾರ್ಟ್ ಫೋನ್ ಬಳಸುವುದರಿಂದ ಮೆಲಟೋನಿನ್ ಎಂಬ ನಿದ್ರೆಗೆ ಸಹಾಯಕ ಹಾರ್ಮೋನ್ ಕಡಿಮೆಯಾಗುತ್ತದೆ, ಆದ್ದರಿಂದ ಸ್ಮಾರ್ಟ್ ಫೋನ್ಗಳ ಬಳಕೆಯಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡ್ಗಳ ಕಾಲ ದೂರದ ವಸ್ತುವನ್ನು ನೋಡುವ “20-20 ನಿಯಮ” ಅನುಸರಿಸಿ, ಪರದೆಯ ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡಿ, ಬ್ಲೂ ಲೈಟ್ ಫಿಲ್ಟರ್ ಅಥವಾ ನೈಟ್ ಮೋಡ್ ಬಳಸುವುದು ಹಾಗೂ ಕಣ್ಣು ತಂಪಾಗಿರಲು ತಣ್ಣೀರಿಂದ ತೊಳೆದು ಸರಿಯಾದ ಬೆಳಕಿನಲ್ಲಿ ಮೊಬೈಲ್ ಬಳಸಿದರೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.
