
ನಿದ್ದೆಯು ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದ ಒಂದು ಚಟುವಟಿಕೆಯಾಗಿದ್ದು, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿದೆ. ಆದರೆ ಅತಿಯಾದ ಈ ಅಭ್ಯಾಸದಿಂದಾಗಿ ನಿಮ್ಮ ಆರೋಗ್ಯ ,ಸಮಸ್ಯೆಗೆ ಒಳಗಾಗಬಹುದು. ಎಲ್ಲರು ನಿದ್ರಿಸಲು ಇಚ್ಛಿಸುತ್ತಾರೆ, ಆದರೆ ಅತಿಯಾಗಿ ಮಲಗುವ ಅಭ್ಯಾಸದಿಂದಾಗಿ ಜೀವನವು ಕಷ್ಟಕ್ಕೆ ಸಿಲುಕಬಹುದಾಗಿದೆ. ಅಗತ್ಯಕ್ಕಿಂತ ಹೆಚ್ಚು ನಿದ್ರಿಸುವುದರಿಂದ ಮೆದುಳಿನ ರಕ್ತನಾಳಗಳಲ್ಲಿ ಶೇಕಡಾ 23 ರಷ್ಟು ತೊಂದರೆ ಹೆಚ್ಚಾಗಬಹುದೆಂದು ಅನೇಕ ಸಂಶೋಧಕರು ತಿಳಿಸಿದ್ದಾರೆ. ಆದರೆ ಮಧ್ಯಾಹ್ನದ ವೇಳೆ 90ನಿಮಿಷಗಳಿಗಿಂತ ಹೆಚ್ಚು ನಿದ್ರಿಸುವುದರಿಂದ ಈ ಅಪಾಯವು ಶೇಕಡಾ 25 ರಷ್ಟು ಹೆಚ್ಚಾಗಬಹುದು. ಆರೋಗ್ಯ ತಜ್ಞರ ಪ್ರಕಾರ ಮನುಷ್ಯನಿಗೆ ಏಳರಿಂದ ಎಂಟು ಘಂಟೆಗಳ ಕಾಲ ನಿದ್ರೆ ಸಾಕು ಎನ್ನುವರು. ಮತ್ತೊಂದು ರೀತಿಯಲ್ಲಿ ಮಧ್ಯಾಹ್ನ 60 ನಿಮಿಷಗಳ ನಿದ್ರೆಯಿಂದಾಗಿ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗುತ್ತದೆ. ಅತಿಯಾದ ನಿದ್ರೆಯಿಂದಾಗಿ ಬೊಜ್ಜು, ಮಧುಮೇಹ, ಸೋಮಾರಿತನ, ಖಿನ್ನತೆ, ಹೃದಯ ಸಮಸ್ಯೆಗಳು, ತಲೆನೋವು ಹೀಗೆ ಹಲವಾರು ಸಮಸ್ಯೆಗಳು ಎದುರಾಗುವ ಸಂಭವವಿದೆ.