
ಕೇಂದ್ರ ಸರ್ಕಾರವು ೨೦೨೧ರಲ್ಲಿ ಚಿನ್ನದ ಒಡವೆಗಳಿಗೆ ಹಾಲ್ಮಾರ್ಕ್ನ್ನು ಕಡ್ಡಾಯಗೊಳಿಸಿತ್ತು. ಆದರೆ ಇದೀಗ ಬೆಳ್ಳಿಗೂ ಹಾಲ್ಮಾರ್ಕ್ನ್ನು ಜಾರಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಬೆಳ್ಳಿಯ ಆಭರಣಗಳ ಪರಿಶುದ್ಧತೆಯನ್ನು ಪತ್ತೆ ಹಚ್ಚುವುದಕ್ಕಾಗಿ ಸೆಪ್ಟೆಂಬರ್ ೦೧ರಿಂದ ಜಾರಿ ಮಾಡಲಾಗುವುದೆಂದು ಮೂಲಗಳು ತಿಳಿಸಿವೆ. ಸದ್ಯದ ಮಟ್ಟಿಗೆ ಇದನ್ನು ಜಾರಿಗೆ ತರುವ ಹಾಗೂ ಬಿಡುವ ಆಯ್ಕೆಯನ್ನು ವ್ಯಾಪಾರಿಗಳಿಗೆ ಬಿಟ್ಟಿದ್ದು. ಸರ್ಕಾರವು ಮುಂದಿನ ದಿನಗಳಲ್ಲಿ ಹಾಲ್ಮಾರ್ಕ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.