
ಸಿಗಂದೂರು: ಸಿಗಂದೂರು ಎಂದಾಗ ಮೊದಲಿಗೆ ನೆನಪಾಗೋದು ಚೌಡೇಶ್ವರಿ ಅಮ್ಮನವರ ದೇವಸ್ಥಾನ. ಇಷ್ಟು ವರ್ಷಗಳು ದೇವಸ್ಥಾನಕ್ಕೆ ಹೋಗಬೇಕಾದರೆ ಲಾಂಚ್ ಮೂಲಕ ಹೋಗಬೇಕಿತ್ತು, ಅದಕ್ಕೆ ಲಿಮಿಟ್ ಕೂಡಾ ಇತ್ತು. ಹಾಗಾಗಿ ಶರಾವತಿ ಹಿನ್ನೀರಿಗೆ ಸಿಗಂದೂರು ಸೇತುವೆ ನಿರ್ಮಿಸಬೇಕೆಂದು ಕೂಗು ಕೇಳಿ ಬಂದಿತ್ತು. ಅದರಂತೆ ಈಗ ಸಿಗಂದೂರು ಸೇತುವೆ ಹಲವು ವರ್ಷಗಳ ಬಳಿಕ ಸಂಪೂರ್ಣ ಗೊಂಡಿದ್ದು. ಮೊದಲ ಲೋಡ್ ಟೆಸ್ಟ್ ಪಾಸ್ ಆಗಿದ್ದು. ಇದು ರಾಜ್ಯದ ಬಹುದೊಡ್ಡ ಪ್ರಾಜೆಕ್ಟ ಹಾಗೂ ಮಲೆನಾಡಿನ ಕನಸಿನ ಯೋಜನೆಯಾಗಿದೆ.