
ಶಿಕಾರಿಪುರ: ಶಿಕಾರಿಪುರ ತಾಲ್ಲೂಕು ಬಂಜಾರ ಸೇವಾ ಸಂಘ, ಬಂಜಾರ ಮಹಿಳಾ ಸಂಘ ಹಾಗೂ ಗೋರ್ ಸೇನಾ ರಾಷ್ಟ್ರೀಯ ಸಂಘಟನೆಗಳು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಪಟ್ಟಿಯಲ್ಲಿ ಲೋಪವಿದೆ ಹಾಗೂ ಇದರಿಂದಾಗಿ ಹಲವು ಜಾತಿಯವರಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸಿ ಪ್ರತಿಭಟನೆಯನ್ನು ನಡೆಸಿದರು. ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಕಛೇರಿಯವರೆಗೆ ಪಾದಯಾತ್ರೆ ಮುಖಾಂತರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿಲು. ಆಯೋಗದ ವರದಿಯಲ್ಲಿ 63 ಜಾತಿಗಳಿಗೆ, ಶೇ೫ರಷ್ಟು ಮೀಸಲಾತಿ ಮಾತ್ರ ನಿಗದಿಸಿರುವುದು ಅನ್ಯಾಯ ಎಂದು ಬಂಜಾರ ಮಹಾಮಠದ ಸೈನಾ ಭಗತ್ ಸ್ವಾಮೀಜಿ ತಿಳಿಸಿದರು. ಶೇ೧೮ರ ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಶೇ15ರಷ್ಟು, ಪರಿಶಿಷ್ಟ ಪಂಗಡಗಳಿಗೆ ಶೇ೩ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಆದರೆ ಒಳ ಮೀಸಲಾತಿ ವರ್ಗೀಕರಣ ಶೇ17ರಷ್ಟು ಎಂದು ನಿಗದಿಪಡಿಸಿ ವಿಂಗಡಿಸಲಾಗಿದೆ. ಇದು ಕಾನೂನುಬಾಹಿರ ಎಂದರು. ಇದರಿಂದಾಗಿ ಲಂಬಾಣಿ ಮತ್ತಯ ಇತರ 63 ಸಮುದಾಯಗಳಿಗೆ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕವಾಗಿ ಪ್ರಸ್ತುತ ನೀಡಿರುವ ಮೀಸಲಾತಿಯಿಂದ ಹೊಡೆತ ಉಂಟಾಗುತ್ತದೆ ಆದ್ದರಿಂದ ಸರ್ಕಾರವು ಈ ಕೂಡಲೇ ವರದಿಯನ್ನು ತಿದ್ದುಪಡಿಗೊಳಿಸಬೇಕೆಂದು ಆಗ್ರಹಿಸಿದರು.